ಬಿಎಸ್‍ವೈ ನಿವಾಸಕ್ಕೆ ಸುದೀಪ್ ದಿಢೀರ್ ಭೇಟಿ

ಬೆಂಗಳೂರು: ಸ್ಯಾಂಡಲ್‍ವುಡ್‍ನ ನಟ ಕಿಚ್ಚ ಸುದೀಪ್ ಇಂದು ಬೆಳಗ್ಗೆ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ದಿಢೀರ್ ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.

ಇದೊಂದು ಔಪಚಾರಿಕ ಭೇಟಿ ಎಂದು ಸಿಎಂ ಕಚೇರಿ ಹೇಳಿದರೂ, ಸುದೀಪ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ, ಸಿಎಂ ಮತ್ತು ಸುದೀಪ್ ನಡುವೆ ವಿವಿಧ ವಿಚಾರಗಳು ಚರ್ಚೆಯಾದವು ಎಂದು ಮೂಲಗಳು ತಿಳಿಸಿವೆ. ಅಭಿನಯ ಚಕ್ರವರ್ತಿ ಕನ್ನಡ ಚಿತ್ರರಂಗದಲ್ಲಿ ಸುದೀಪ್ 25 ವರ್ಷ ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಬೆಳ್ಳಿ ಹಬ್ಬ ಕೂಡ ಆಚರಿಸಲಾಗಿದೆ. ಈ ಸಂಭ್ರಮದಲ್ಲಿ ಸಿಎಂ ಬಿಎಸ್‍ವೈ ಕೂಡ ಪಾಲ್ಗೊಂಡಿದ್ದರು. ಹೀಗಾಗಿ ಇಂದು ಬೆಳಗ್ಗೆ ಯಡಿಯೂರಪ್ಪ ಅವರನ್ನ ಭೇಟಿ ಮಾಡಿದ ಸುದೀಪ್, ಅಭಿನಂದನೆ ಸಲ್ಲಿಸಿದರು. ಸುದೀಪ್‍ಗೆ ನಿರ್ಮಾಪಕ ಜಾಕ್ ಮಂಜು ಸಾತ್ ನೀಡಿದರು. ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಉಪಸ್ಥಿತರಿದ್ದರು.

NEWS DESK

TIMES OF BENGALURU