ಭೂಕಬಳಿಕೆ ನಿಯಂತ್ರಣಕ್ಕೆ ಕಠಿಣ ಕಾನೂನು

ಬೆಂಗಳೂರು: ಭೂಕಬಳಿಕೆದಾರರನ್ನು ನಿಯಂತ್ರಿಸಲು ಕಠಿಣ ಕಾನೂನು ಕ್ರಮ ತರಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಬಜೆಟ್ ಚರ್ಚೆಯಲ್ಲಿ ಪಾಲ್ಗೂಂಡು ಮಾತನಾಡಿದರು. ಇದೇ ವಿಚಾರವಾಗಿ ಜೆಡಿಎಸ್ ಸದಸ್ಯ ರಾಮಸ್ವಾಮಿ ಪ್ರತಿಕ್ರಿಯಿಸಿ, ಬೆಂಗಳೂರಿನ ಬಿಎಂಆರ್ ಡಿ ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರದ ಬಜೆಟ್‍ಗಿಂತ ಭೂ ಕಬಳಿಕೆ ದರ ಹೆಚ್ಚಾಗಿದೆ. ಅದನ್ನು ಪ್ರಶ್ನಿಸಲು ಯಾರಿಗೂ ಆಗುತ್ತಿಲ್ಲ. ಸುಳ್ಳು ದಾಖಲೆ ಸೃಷ್ಟಿಸಿ ಒತ್ತುವರಿ ಮಾಡಿಕೊಂಡು ಸುಮಾರು 5 ಸಾವಿರ ಅಕ್ರಮ ಲೇಔಟ್‍ಗಳು ಹುಟ್ಟಿಕೊಂಡಿವೆ. ಇದು ಸುಮಾರು 50 ಸಾವಿರ ಕೋಟಿ ರೂ. ಅವ್ಯವಹಾರ. ಇಂತಹ ಅಕ್ರಮಗಳನ್ನು ತಡೆಯುವ ಕೆಲಸ ಮಾಡಬೇಕು ಎಂದರು.

ಜೆಡಿಎಸ್ ಶಾಸಕ ಶಿವಲಿಂಗೇಗೌಡ ಮಾತನಾಡಿ, ಬೆಂಗಳೂರು ಸುತ್ತ ಮುತ್ತ ನೈಸ್ ಕಂಪನಿ ಜಮೀನು ವಾಪಸ್ ಪಡೆದರೆ, ಎರಡು ಬಜೆಟ್‍ನ ಅನುದಾನ ಬರಲಿದೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಆರ್.ಅಶೋಕ್ ಇದು ಈಗ ಆರಂಭವಾಗಿರುವ ಖಾಯಿಲೆ ಅಲ್ಲ, ಇದು ಬೃಹದಾಕಾರವಾಗಿ ಬೆಳೆದು ನಿಂತಿದೆ. ನಾನು ಬಂದ ಮೇಲೆ ಖಾಸಗಿ ಲೇಔಟ್‍ಗಳಿಗೆ ಅನುಮತಿ ನೀಡುತ್ತಿಲ್ಲ ಎಂಟು ತಹಸೀಲ್ದಾರ್ ಗಳನ್ನು ಅಮಾನತು ಮಾಡಿದ್ದೇನೆ ಎಂದರು. ಇದರ ನಿಯಂತ್ರಣಕ್ಕೆ ಕ್ರಮ ವಹಿಸುತ್ತೇವೆ ಎಂದು ಹೇಳಿದರು.

NEWS DESK
TIMES OF BENGALURU