ಬೆಂಗಳೂರು: ತಿಲಕ್ ನಗರ ಠಾಣೆ ಪೊಲೀಸರು ವಿನಾಕಾರಣ ಕೆಲ ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಆರೋಪಿಸಿ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಅವರು ನಿನ್ನೆ ತಡರಾತ್ರಿ ಠಾಣೆ ಎದುರಿನ ರಸ್ತೆಯಲ್ಲೇ ಪ್ರತಿಭಟನೆ ನಡೆಸಿದರು.
ಕಾಲೇಜೊಂದರ ಯುವಕರ ಮೇಲೆ ಠಾಣೆ ಕೆಲ ಸಿಬ್ಬಂದಿ ಹಲ್ಲೆ ಮಾಡಿದ್ದರು. ಅದನ್ನು ಪ್ರಶ್ನಿಸಿದ್ದ ಕೆಲ ಯುವಕರನ್ನು ಠಾಣೆ ಕರೆತಂದು ಪುನಃ ಥಳಿಸಿದ್ದರು. ಆ ಬಗ್ಗೆ ಯುವಕರು ಪ್ರತಿಭಟನೆ ಮಾಡಿದ್ದಕ್ಕೂ ಪೊಲೀಸರು ಬೆದರಿಸಿದ್ದರು ಎನ್ನಲಾಗಿದ್ದುಈ ಬಗ್ಗೆ ಸುದ್ದಿ ತಿಳಿದ ಶಾಸಕಿ, ಸ್ಥಳಕ್ಕೆ ಬಂದು ಘೋಷಣಾ ಫಲಕ ಹಿಡಿದು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ಶಾಸಕಿ ಪ್ರತಿಭಟನೆ ಬಗ್ಗೆ ಮಾಹಿತಿ ಪಡೆದ ಇನ್ಸ್ಪೆಕ್ಟರ್ ಹಾಗೂ ಎಸಿಪಿ ಸ್ಥಳಕ್ಕೆ ಬಂದು ಸಮಾಧಾನಪಡಿಸಲು ಯತ್ನಿಸಿದರು.
ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶಾಸಕಿ ಪಟ್ಟು ಹಿಡಿದು ರಸ್ತೆಯಲ್ಲೇ ಪ್ರತಿಭಟನೆ ಮುಂದುವರಿಸಿದರು.ಯಾವುದೇ ತಪ್ಪು ಮಾಡದ ಯುವಕರ ಮೇಲೆ ಹಲ್ಲೆ ಮಾಡಲು ಪೆÇಲೀಸರಿಗೆ ಅಧಿಕಾರ ಕೊಟ್ಟವರು ಯಾರು’ ಎಂದು ಶಾಸಕಿ ಸೌಮ್ಯಾ ರೆಡ್ಡಿ ಪ್ರಶ್ನಿಸಿದರು. ಇತ್ತೀಚಿನ ದಿನಗಳಲ್ಲಿ ಪೊಲೀಸರು ಕಾನೂನು ವ್ಯಾಪ್ತಿ ಮೀರಿ ವರ್ತಿಸುತ್ತಿದ್ದಾರೆ. ಅಮಾಯಕ ಯುವಕರನ್ನು ಥಳಿಸಿರುವುದು ಯಾವ ನ್ಯಾಯ. ಈಗ ಯುವಕರಿಗೆ ಆಗಿರುವ ಅನ್ಯಾಯ, ನಾಳೆ ನಮಗೂ ನಮ್ಮ ಸಹೋದರರಿಗೂ ಹಾಗೂ ಮಕ್ಕಳಿಗೂ ಆಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
NEWS DESK
TIMES OF BEGALURU