ವೈದ್ಯಕೀಯ ಸಿಬ್ಬಂದಿಗಳ ರಜೆ ರದ್ದು

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಮುನ್ಸೂಚನೆಯ ಹಿನ್ನಲೆಯಲ್ಲಿ, ಕೊರೋನಾ ವಿರುದ್ಧದ ಹೋರಾಟಕ್ಕಾಗಿ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಸಿಬ್ಬಂದಿಗಳಿಗೆ 50 ದಿನ ಯಾವುದೇ ಸಿಬ್ಬಂದಿಗಳಿಗೂ ರಜೆಯನ್ನು ನೀಡುವುದಿಲ್ಲ. 50 ದಿನಗಳ ವರೆಗೆ ರಜೆಯನ್ನು ರದ್ದು ಪಡಿಸಲಾಗಿದೆ ಎಂಬುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಇಂದು ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಮುನ್ಸೂಚನೆಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಆರೋಗ್ಯ ಇಲಾಖೆ ಸಿಬ್ಬಂದಿಗೆ ರಜೆ ರದ್ದು ಪಡಿಸಲಾಗಿದೆ. 50 ದಿನ ಯಾವ ಸಿಬ್ಬಂದಿಗೂ ರಜೆ ಇಲ್ಲ. ಕೊರೋನಾ ಎದುರಿಸಲು ಸಿಬ್ಬಂದಿ ರಜೆ ರದ್ದು ಪಡಿಸಲಾಗಿದೆ. ನಾನೂ ಸೇರಿದಂತೆ ಯಾರಿಗೂ ರಜೆ ಇಲ್ಲ ಎಂದರು.

NEWS DESK

TIMES OF BENGALURU