ಪಿಎಸ್‍ಐ ಮೇಲೆ ಚಿನ್ನ ಕಳವು ಆರೋಪ

ಬೆಂಗಳೂರು: ಹಲಸೂರು ಗೇಟ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಒಬ್ಬರು ಚಿನ್ನದ ಉದ್ಯಮಿಯಿಂದ 10.85 ಲಕ್ಷ ರೂ. ಮೌಲ್ಯದ ಚಿನ್ನವನ್ನು ಕಳವು ಮಾಡಿರುವ ಆರೋಪಕ್ಕೆ ಸಿಲುಕಿದ್ದಾರೆ. ಈ ಸಂಬಂಧ ದೂರು ದಾಖಲಿಸಿರುವ ಉದ್ಯಮಿ, ಪಿಎಸ್ಐ ಮತ್ತಿತರ ಪೊಲೀಸರ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಅಂಗಡಿಗೆ ಬಂದ ಇನ್ಸ್ಪೆಕ್ಟರ್ ಶಿವಕುಮಾರ್ ಮತ್ತು ಕಾನ್ಸ್ಟೇಬಲ್ ಯಾವುದೇ ಕಾರಣವಿಲ್ಲದೆ ಚಿನ್ನ ಮತ್ತು ನಗದನ್ನು ತೆಗೆದುಕೊಂಡರಲ್ಲದೇ ನನ್ನನ್ನೂ ಪೊಲೀಸ್ ಠಾಣೆಗೆ ಕರೆದೊಯ್ದರು. ರಾತ್ರಿ 11 ಗಂಟೆಯವರೆಗೂ ಠಾಣೆಯಲ್ಲಿಯೇ ನಮ್ಮನ್ನು ಇರಿಸಿಕೊಂಡಿದ್ದರು ಎಂದು ದೂರು ಕೊಡಲಾಗಿದೆ. ಈ ವಿಚಾರ ಕುರಿತು ಎಸ್ ಐ ಮತ್ತಿತರರ ವಿರುದ್ದ ಇಲಾಖೆ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

NEWS DESK
TIMES OF BENGALURU