ಗೋಮಾಂಸ ರಫ್ತು ಬ್ಯಾನ್ ಮಾಡಿ

ಬೆಂಗಳೂರು: ರಾಜ್ಯದಲ್ಲಿ ಗೋ ಹತ್ಯೆ ಕಾನೂನು ಇದೆ. ಅದರೆ ಸಮರ್ಪಕವಾಗಿ ಅನುಷ್ಠಾನ ಆಗುತ್ತಿಲ್ಲ. ದೇಶದಲ್ಲಿ ಗೋಹತ್ಯೆ ವಿಚಾರವಾಗಿ ಒಂದೇ ಮಾದರಿ ಕಾನೂನು ಜಾರಿಯಾಗಲಿ ಎಂದು ಕಾಂಗ್ರೆಸ್ ಶಾಸಕ ಯು.ಟಿ ಖಾದರ್ ಆಗ್ರಹಿಸಿದರು. ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಯು.ಟಿ ಖಾದರ್ ಮಾತನಾಡಿ, ಗೋ ಹತ್ಯೆ ವಿಚಾರವಾಗಿ ಕರ್ನಾಟಕ, ಗೋವಾ, ಕೇರಳಕ್ಕೆ ಸಂಬಂಧಿಸಿ ಭಿನ್ನ ನಿಲುವುಗಳಿವೆ. ಇದರ ಬದಲು ಒಂದೇ ದೇಶ, ಒಂದೇ ಕಾರ್ಡ್ ಹಾಗೂ ಒಂದೇ ಚುನಾವಣೆ ಮಾದರಿ ಒಂದೇ ಕಾನೂನು ಜಾರಿಯಾಗಲಿ. ದೇಶದಲ್ಲಿ ಈ ಬಗ್ಗೆ ಗೊಂದಲವೇಕೆ ಎಂದು ಪ್ರಶ್ನಿಸಿದರು. ಬಿಜೆಪಿಗೆ ನಿಜವಾದ ಗೋ ಕಾಳಜಿ ಇದ್ದರೆ ಗೋಮಾಂಸ ರಫ್ತು ಬ್ಯಾನ್ ಮಾಡಿ ಎಂದು ಆಗ್ರಹಿಸಿದರು.

NEWS DESK
TIMES OF BENGALURU