ಜಾತಿಗೊಂದು ನಿಗಮ ಸ್ಥಾಪನೆ ; ವಿಚಾರಣೆ ಮುಂದೂಡಿಕೆ

ಬೆಂಗಳೂರು: ಜಾತಿಗೊಂದು ನಿಗಮ ಸ್ಥಾಪನೆಯ ಹಿಂದೆ ಅಸಮಾನತೆ ನಿರ್ಮೂಲನೆಯ ಉದ್ದೇಶ ಇದೆ ಎಂಬ ಸಮರ್ಥನೆಯನ್ನು ಹೈಕೋರ್ಟ್‍ಗೆ ಸರ್ಕಾರ ದೂರು ಸಲ್ಲಿಸಿದೆ. ವಿವಿಧ ನಿಗಮಗಳು ಮತ್ತು ಅಭಿವೃದ್ಧಿ ಮಂಡಳಿಗಳ ಸ್ಥಾಪನೆಯನ್ನು ಬಲವಾಗಿ ಸಮರ್ಥಿಸಿಕೊಂಡಿದೆ. ಜಾತಿಗೊಂದು ನಿಗಮ ಮತ್ತು ಮಂಡಳಿ ಸ್ಥಾಪಿಸುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯ ಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಎಲ್ಲಾ ಮತದ ಪ್ರತಿಯೊಬ್ಬ ವ್ಯಕ್ತಿಯೂ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮುಂದಿದ್ದಾರೆ ಎಂದು ಹೇಳಲು ಆಗುವುದಿಲ್ಲ. ಅಂತವರಿಗೆ ಸಹಾಯ ಹಸ್ತ ಚಾಚುವುದು ಸರ್ಕಾರದ ಕರ್ತವ್ಯ ಎಂದು ಆಕ್ಷೇಪಣೆಯಲ್ಲಿ ವಿವರಿಸಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯ ಪೀಠ ವಿಚಾರಣೆಯನ್ನು ಮಾ.31 ಕ್ಕೆ ಮುಂದೂಡಿತು.

NEWS DESK
TIMES OF BENGALURU