ಕೊರೊನಾ ನಿಯಂತ್ರಣಕ್ಕೆ ಅನುದಾನ ಬಿಡುಗಡೆ

ಬೆಂಗಳೂರು : ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಬಿಬಿಎಂಪಿಗೆ 155 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ವೇತನ ಸೇರಿದಂತೆ ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ.

ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಸಲುವಾಗಿ ಎಸ್‍ಡಿಆರ್‍ಎಫ್ ಅಡಿಯಲ್ಲಿ ಶೇ.50ರಷ್ಟು ವೆಚ್ಚ ಭರಿಸಲು ಅನುಮತಿ ನೀಡಿದ್ದು, ಸೋಂಕು ನಿಯಂತ್ರಣಕ್ಕೆ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಡಿ ಬಿಬಿಎಂಪಿಗೆ ಒಟ್ಟು 105 ಕೋಟಿ ರೂ. ಅನುದಾನ ಹಾಗೂ ಹೆಚ್ಚುವರಿಯಾಗಿ 50 ಕೋಟಿ ಅನುದಾನ ಸೇರಿದಂತೆ 155 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ.

ಈ ಮೊತ್ತದಲ್ಲಿ ಬೆಂಗಳೂರು ಪಾಲಿಕೆಯ ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ತೊಡಗಿರುವ ಹೊರಗುತ್ತಿಗೆ, ಗುತ್ತಿಗೆ ಸಿಬ್ಬಂದಿಗಳ ಸಂಭಾವನೆ ಪಾವತಿಸಲು ಹಾಗೂ ಕೋವಿಡ್ ನಿಯಂತ್ರಣ ಕಾರ್ಯಗಳಿಗಾಗಿ ಬಳಸುವುದು, ಎಲ್ಲ ವೈದ್ಯಕೀಯ ಪರಿಕರಗಳನ್ನು ಮತ್ತು ಆರ್‍ಟಿಪಿಸಿಆರ್ ಒಳಗೊಂಡ ಪರೀಕ್ಷಾ ಕಿಟ್ ಇತ್ಯಾದಿಗಳನ್ನು ಕರ್ನಾಟಕ ರಾಜ್ಯ ಡ್ರಗ್ಸ್ ಮತ್ತು ಲ್ಯಾಜಿಸ್ಟಿಕ್ ವೇರ್‍ಹೌಸಿಂಗ್  ಸೊಸೈಟಿ ಮೂಲಕವೇ ಖರೀದಿಸುವುದು. ಬಿಬಿಎಂಪಿ ಮಾರ್ಗಸೂಚಿಯನ್ವಯ ಅನುದಾನ ವೆಚ್ಚ ಮಾಡಿದ್ದಕ್ಕೆ ಹಣ ಬಳಕೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

NEWS DESK

TIMES OF BENGALURU