ಗಾರ್ಮೆಂಟ್ಸ್ ಕಾರ್ಮಿಕರಿಗೆ 105 ರೂ.ಗೆ ಬಸ್ ಪಾಸ್

ಬೆಂಗಳೂರು: ರಾಜ್ಯ ಸರ್ಕಾರದ ವನಿತಾ ಸಂಗಾತಿ ಯೋಜನೆಯಡಿ ಗಾರ್ಮೆಂಟ್ಸ್ ಮಹಿಳೆಯರಿಗೆ 105 ರೂಪಾಯಿಗೆ ಸಿಟಿ ಬಸ್ ಪಾಸ್ ನೀಡಲಾಗುವುದು. ಬಿಎಂಟಿಸಿ ವತಿಯಿಂದ ವನಿತಾ ಸಂಗಾತಿ ಯೋಜನೆಯಡಿ 150 ರೂ. ನಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಕಾರ್ಯ ನಿರ್ವಹಿಸುವ ಮಹಿಳೆಯರಿಗೆ ಮಾಸಿಕ ಪಾಸ್ ವಿತರಿಸಲಾಗುವುದು.

ಕಳೆದ ವರ್ಷದ ಬಜೆಟ್ ನಲ್ಲಿ ರಿಯಾಯಿತಿ ದರದಲ್ಲಿ ಬಿಎಂಟಿಸಿ ಬಸ್ ಪಾಸ್ ನೀಡುವ ಯೋಜನೆಯನ್ನು ಘೋಷಿಸಲಾಗಿತ್ತು. ಗಾರ್ಮೆಂಟ್ಸ್ ಕಂಪನಿಗಳಿಗೆ ಶೇ.60 ರಷ್ಟು, ರಾಜ್ಯ ಸರ್ಕಾರ ಶೇ.20 ರಷ್ಟು, ಬಿಎಂಟಿಸಿ ಹಾಗೂ ಮಹಿಳೆಯೆರಿಗೆ ಶೇ.10 ರಷ್ಟು ಹಣ ಭರಿಸಲಿದ್ದು. 105 ರೂಪಾಯಿ ಪಾವತಿಸಿ ಮಾಸಿಕ ಬಸ್ ಪಾಸ್ ಪಡೆದುಕೊಳ್ಳಬಹುದು ಎಂದು ವನಿತಾ ಸಂಗಾತಿ ಯೋಜನೆಯಡಿ ತಿಳಿಸಲಾಗಿದೆ. ಇದರಿಂದ ಸುಮಾರು 5 ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಅನುಕೂಲವಾಗಲಿದೆ.

NEWS DESK
TIMES OF BENGALURU