ಸಚಿವರ ಮನೆ ಎದುರು ಚಾಲಕ, ಗನ್ ಮ್ಯಾನ್ ಹೊಡೆದಾಟ

ಬೆಂಗಳೂರು: ಸದಾಶಿವನಗರದಲ್ಲಿರುವ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರ ಮನೆ ಎದುರು ಚಾಲಕ ಸೋಮಶೇಖರ್ ಮೇಲೆ ಗನ್ ಮ್ಯಾನ್ ತಿಮ್ಮಯ್ಯ ಹಲ್ಲೆ ಮಾಡಿದ್ದಾರೆ. ಸಚಿವರ ಮನೆ ಎದುರು ನಡುರಸ್ತೆಯಲ್ಲೇ ಇಬ್ಬರು ಹೊಡೆದಾಡಿಕೊಂಡಿದ್ದಾರೆ.

ಸುಧಾಕರ್ ಗನ್ ಮ್ಯಾನ್ ಮತ್ತು ಖಾಸಗಿ ಚಾಲಕ ಸೋಮಶೇಖರ್ ಅವರ ನಡುವೆ ಹೊಡೆದಾಟ ನಡೆದಿದ್ದು, ಸ್ಥಳದಲ್ಲಿದ್ದವರು ಇಬ್ಬರನ್ನು ಸಮಾಧಾನಪಡಿಸಿದ್ದಾರೆ. ಈ ವೇಳೆ ಹೆಚ್ಚು ಕಡಿಮೆಯಾಗಿ ಗನ್ ಮ್ಯಾನ್ ಬಳಿ ಇದ್ದ ಗನ್ ನಿಂದ ಗುಂಡು ಹಾರಿದ್ದರೆ ಅಪಾಯವಾಗುವ ಸಾಧ್ಯತೆ ಇತ್ತು ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

NEWS DESK

TIMES OF BENGALURU