ಕಾರ್ಮಿಕ ವಲಯಕ್ಕೆ ಮತ್ತೊಂದು ಸಿಹಿಸುದ್ದಿ

ಬೆಂಗಳೂರು: ಕೇಂದ್ರ ಸರ್ಕಾರವು ಕಾರ್ಮಿಕ ವಲಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ದಿನಗೂಲಿಯನ್ನು 14 ರೂ.ಗೆ ಹೆಚ್ಚಿಸಲಾಗಿದೆ. ಸದ್ಯ ನರೇಗಾ ಕೆಲಸಕ್ಕೆ ದಿನಕ್ಕೆ 275 ರೂ. ಕೂಲಿ ನೀಡಲಾಗುತ್ತಿತ್ತು. ಆದರೆ ಇದೀಗ ಮುಂದಿನ ತಿಂಗಳಿಂದ 289 ರೂ. ಗಳಿಗೆ ಹೆಚ್ಚಿಸಲಾಗಿದೆ.

ಕೇಂದ್ರ ಸರ್ಕಾರ ಈ ಆದೇಶ ಹೊರಡಿಸಿದ್ದು, ನೂತನ ದರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿಯೊಂದು ಬಡ ಕುಟುಂಬದವರಿಗೂ 100 ದಿನಗಳ ಕಾಲ ಉದ್ಯೋಗ ನೀಡಿ ವೇತನ ಕೊಟ್ಟು ಬಡವರ ಆರ್ಥಿಕ ಸಾಮಾರ್ಥ್ಯ ಹೆಚ್ಚಿಸುವುದು ನರೇಗಾ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಹಿಂದೆ 275 ರೂ. ಕೂಲಿ ಹಣ ನೀಡಲಾಗುತ್ತಿತ್ತು. ಅದರೆ ಇದೀಗ 289 ರೂ. ಗೆ ಏರಿಕೆಯಾಗಿದೆ.

NEWS DESK
TIMES OF BENGALURU