ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಬಿಬಿಎಂಪಿ

ಬೆಂಗಳೂರು : 3 ತಿಂಗಳ ಬಳಿಕ ದೇಶದಲ್ಲಿ ಮತ್ತೆ ಕೋವಿಡ್ ಅಟ್ಟಹಾಸ ಜೋರಾಗಿಯೇ ಇದೆ. ರಾಜ್ಯದಲ್ಲಿಯೂ ದಿನದಿಂದ ದಿನಕ್ಕೆ ಕೋವಿಡ್ ಸೋಂಕು ಏರಿಕೆಯಾಗುತ್ತಿದ್ದು, ಕೋವಿಡ್ ಎರಡನೇ ಅಲೆಯ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಬಿ.ಬಿ.ಎಂ.ಪಿ ಮುಂದಾಗಿದೆ.

ಬಿ.ಬಿ.ಎಂ.ಪಿ ಪಾರ್ಕ್‍ಗಳಲ್ಲಿ ಓಪನ್ ಜಿಮ್‍ಗಳನ್ನು ಬಂದ್ ಮಾಡಲು ಹಾಗೂ ಸ್ವಿಮಿಂಗ್ ಪೂಲ್ ಗಳ ಪ್ರವೇಶಕ್ಕೆ ನಿಬರ್ಂಧ ಹೇರಲು ನಿರ್ಧರಿಸಲಾಗಿದೆ.ಅಪಾರ್ಟ್ಮೆಂಟ್ ಗಳಲ್ಲಿರುವ ಪಾರ್ಟಿ ಹಾಲ್ ಬಂದ್ ಮಾಡಲು. ಕಲ್ಯಾಣ ಮಂಟಪಗಳಲ್ಲಿ 200 ಜನರು, ಮಾತ್ರ ಸೇರಲು ಅವಕಾಶ. ಸಿನಿಮಾ ಹಾಲ್ ಗಳಲ್ಲಿ ಶೇಕಡಾ 50 ಜನರಿಗೆ, ಮಾತ್ರ ಅವಕಾಶ. ಥಿಯೇಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರಕ್ಕೆ ಬಿ.ಬಿ.ಎಂ.ಪಿ ಪ್ರಸ್ತಾವನೆ ಸಲ್ಲಿಸಿದೆ. ಸರ್ಕಾರ ಪ್ರಸ್ತಾವನೆ ಒಪ್ಪಿದ್ದಲ್ಲಿ ಮುಂದಿನ ವಾರದಿಂದಲೇ ಕಟ್ಟುನಿಟ್ಟಿನ ಆದೇಶಗಳನ್ನು ಮತ್ತೆ ಜಾರಿಗೆ ಬರಲಿದೆ ಎಂದು ಬಿ.ಬಿ.ಎಂ.ಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್, ತಿಳಿಸಿದ್ದಾರೆ.

NEWS DESK

TIMES OF BENGALURU