ಬಿಬಿಎಂಪಿಯಿಂದ ಮೈಕ್ರೋ ಕಂಟೈನ್ಮೇಂಟ್ ಅಸ್ತ್ರ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ವೈರಸ್‍ನ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಮತ್ತೆ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬಿಬಿಎಂಪಿ ಮೈಕ್ರೋ ಕಂಟೈನ್ಮೆಂಟ್ ಝೋನ್ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ.

ಸದ್ಯ ಬೆಂಗಳೂರಿನ 12 ಭಾಗಗಲಲ್ಲಿ ಮೈಕ್ರೋ ಕಂಟೈನ್ಮೇಂಟ್ ಝೋನ್ ಇದ್ದು, 5 ಕ್ಕಿಂತ ಹೆಚ್ಚು ಕೊರೊನಾ ವೈರಸ್ ಪಾಸಿಟಿವ್ ಬರುವ ಮನೆಗಳಿಗೆ ಮೈಕ್ರೋ ಕಂಟೈನ್ಮೆಂಟ್ ಝೋನ್ ಮಾಡಲು ಬಿಬಿಎಂಪಿ ನಿರ್ಧರಿಸಿದೆ. ಮೈಕ್ರೋ ಕಂಟೈನ್ಮೇಂಟ್ ಝೋನ್ ಪ್ರದೇಶದ 100 ಮೀಟರ್ ಸುತ್ತ ಸ್ಯಾನಿಟೈಜರ್ ಮಾಡುವುದು ಹಾಗೂ ಸುತ್ತಮುತ್ತಲಿನ ಮನೆಗಳ ಸದಸ್ಯರಿಗೆ ಕೊರೊನಾ ಟೆಸ್ಟ್ ಮಾಡಲು ಬಿಬಿಎಂಪಿ ನಿರ್ಧರಿಸಿದೆ ಎನ್ನಲಾಗಿದೆ.

NEWS DESK
TIMES OF BENGALURU