ಮಾದಕ ವಸ್ತು ಮಾರಾಟ : ಇಬ್ಬರ ಬಂಧನ

ಬೆಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆ ಸೇರಿ ಇಬ್ಬರನ್ನು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬಂಧಿಸಿದ್ದು ಒಕೋರೋ ಕ್ರಿಶ್ಚಿಯಾನಾ ಇಫೆನಿ ಮತ್ತು ರೋಹಿತ್ ಕ್ರಿಸ್ಟೊಫರ್ ಬಂಧಿತ ಆರೋಪಿಗಳಾಗಿದ್ದಾರೆ.

ಪೊಲೀಸರ ಕಾರ್ಯಾಚರಣೆಯಲ್ಲಿ ಆರೋಪಿಗಳು ಸಿಕ್ಕಿ ಬಿದ್ದಿದ್ದು, 35 ಲಕ್ಷ ಮೌಲ್ಯದ 350 ಎಂಡಿಎಂಎ ವಶಕ್ಕೆ ಪಡೆಯಲಾಗಿದೆ. ನೈಜೀರಿಯನ್ ಪ್ರಜೆಯಾದ ಓರ್ವ 2018ರಲ್ಲಿ ಟೂರಿಸ್ಟ್ ವೀಸಾದಲ್ಲಿ ಭಾರತಕ್ಕೆ ಬಂದಿಳಿದಿದ್ದ. ಮೂರು ತಿಂಗಳ ಮಟ್ಟಿಗೆ ದೇಶಕ್ಕೆ ಬಂದಿದ್ದವ ಇಲ್ಲಿಯೇ ಠಿಕಾಣಿ ಹೂಡಿದ್ದ. ಬೆಂಗಳೂರು ಶೂಟರ್ಸ್ ಎಂಬ ಫುಟ್ ಬಾಲ್ ಅಕಾಡಮಿಯಲ್ಲಿ ರೋಹಿತ್ ಕ್ರಿಸ್ಟೊಫರ್ ಎಂಬುವವರ ಪರಿಚಯವಾಗಿತ್ತು.

ರೋಹಿತ್ ಕ್ರಿಸ್ಟೊಫರ್ ಮುಖಾಂತರ ರಾಮಮೂರ್ತಿನಗರ ಕೆ.ಆರ್.ಪುರಂ ಭಾಗದಲ್ಲಿರುವ ಆಫ್ರಿಕನ್ ಪ್ರಜೆಗಳಿಗೆ ಡ್ರಗ್ ಸಪ್ಲೈ ಮಾಡುತ್ತಿದ್ದರು.ಆರೋಪಿಗಳು ಕೊರಿಯರ್ ಮುಖಾಂತರ ಎಂಡಿಎಂಎ ತರಿಸಿ ಮಾರಾಟ ಮಾಡುತ್ತಿದ್ದರು. ಯೂ ಕ್ಯಾಷ್, ಮನಿಟ್ರಾನ್ಸ್ಫರ್ ಮುಖಾಂತರ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು. ಆರೋಪಿಗಳ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 

NEWS DESK

TIMES OF BENGALURU