ಯಲಹಂಕದಲ್ಲಿ ಮೂರು ಕೊರೊನಾ ಕ್ಲಸ್ಟರ್ ಗಳ ಪತ್ತೆ

ಬೆಂಗಳೂರು: ಕೊರೊನಾ ಸೋಂಕಿತರ ಪ್ರಮಾಣ ಏರಿಕೆಯಾಗುತ್ತಿದ್ದು, ಕೋವಿಡ್-19 ಕ್ಲಸ್ಟರ್ ಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಹೊಸದಾಗಿ 3 ಕ್ಲಸ್ಟರ್ ಗಳನ್ನು ಗುರುತಿಸಲಾಗಿದೆ. ಗುರುವಾರ ಒಂದೇ ದಿನ 925 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಅಪಾರ್ಟ್‍ಮೆಂಟ್‍ಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು, ಯಲಹಂಕ ವಲಯದಲ್ಲಿ ಒಂದೇ ದಿನ ಮೂರು ಹೊಸ ಕ್ಲಸ್ಟರ್ ಗಳನ್ನು ನಿರ್ಮಿಸಲಾಗಿದೆ.

ವಾರ್ಡ್‍ನ ಸಂಖ್ಯೆ 4, 9 ಮತ್ತು 10 ರಲ್ಲಿನ ಅಪಾರ್ಟ್‍ಮೆಂಟ್‍ಗಳಲ್ಲಿ ಐದಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಇವುಗಳನ್ನು ಕ್ಲಸ್ಟರ್ ಎಂದು ಗುರುತಿಸಲಾಗಿದೆ. ವಾರ್ಡ್ ಸಂಖ್ಯೆ 9 ರ ಗೋವರ್ಧನ್ ರೆಸಿಡೆನ್ಸಿಯಲ್ಲಿ ಮಾ.1 ರಂದು ಕೇರಳದಿಂದ ಬಂದ ವ್ಯಕ್ತಿಯೊಬ್ಬರಲ್ಲಿ ಕ್ಲಸ್ಟರ್ ಮಟ್ಟದಲ್ಲಿ ದೃಢಪಟ್ಟಿದೆ. ಅವರು ವಾಸವಿದ್ದ ಇಡೀ ಅಪಾರ್ಟ್‍ಮೆಂಟ್‍ನ್ನು ಕಟ್ಟುನಿಟ್ಟಾಗಿ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಅದೇ ರೀತಿ ವಾರ್ಡ್ 10 ರಲ್ಲಿನ ಬಿಇಎಲ್ ಬಡಾವಣೆಯಲ್ಲಿ ಒಂದೇ ಕುಟುಂಬದ ಐವರಲ್ಲಿ ಕೋವಿಡ್ ದೃಢಪಟ್ಟಿದೆ. ಆದ ಕಾರಣ ಕೋವಿಡ್-19 ಕ್ಲಸ್ಟರ್‍ಗಳ ಸಂಖ್ಯೆ ಹೆಚ್ಚಿಸಲಾಗಿದೆ.

NEWS DESK
TIMES OF BENGALURU