ಕೋವಿಡ್ ಲಸಿಕೆ ಬೆಂಗಳೂರಿನಲ್ಲಿ ಉತ್ಪಾದನೆ

ಬೆಂಗಳೂರು: ರಷ್ಯಾದ ಕೋವಿಡ್ ಲಸಿಕೆಯಾದ ಸ್ಪುಟ್ನಿಕ್ ವಿ ಯನ್ನು ಬೆಂಗಳೂರಿನ ಕೇಂದ್ರ ಕಚೇರಿಯ ಸ್ಟ್ರೈಡ್ಸ್ ಫಾರ್ಮಾ ಸೈನ್ಸ್ನ ಅಂಗ ಸಂಸ್ಥೆ ಸ್ಟೆಲಿಸ್ ಬಯೋಫಾರ್ಮಾ ತಯಾರಿಸಲಿದೆ. ರಷ್ಯಾದ ಸ್ಪುಟ್ನಿಕ್ ಕೋವಿಡ್ ಲಸಿಕೆಯು ಹಲವು ತಿಂಗಳ ಹಿಂದೆಯೇ ಭಾರತದಲ್ಲಿ ತುರ್ತು ಬಳಕೆಗೆ ಅನುಮತಿ ಕೋರಿತ್ತು. ಆದರೆ ಇದುವರೆಗೂ ಅದಕ್ಕೆ ಅನುಮತಿ ನೀಡಿಲ್ಲ.

ಈ ನಡುವೆ ಸ್ಟೆಲಿಸ್ ಬಯೋಫಾರ್ಮಾ ಕನಿಷ್ಠ 200 ಮಿಲಿಯನ್ ಡೋಸ್ ಲಸಿಕೆಗಳ ಉತ್ಪಾದನೆ ಹಾಗೂ ಪೂರೈಕೆಯ ಕಾರ್ಯ ನಡೆಸುತ್ತಿದೆ. ಜುಲೈ-ಸೆಪ್ಟೆಂಬರ್ ಅವಧಿಯಿಂದ ಸ್ಪುಟ್ನಿಕ್ ಲಸಿಕೆಯ ಪೂರೈಕೆ ಆರಂಭಿಸುವ ಗುರಿ ಹೊಂದಿದೆ. ಸ್ಟೆಲಿಸ್, ಸ್ಪುಟ್ನಿಕ್ ಲಸಿಕೆಗಾಗಿ ಆರ್‌ಡಿಐಎಫ್ ಜತೆ ಒಪ್ಪಂದ ಮಾಡಿಕೊಂಡ ಭಾರತದ ನಾಲ್ಕನೇಯ ಕಂಪನಿಯಾಗಿದೆ.

NEWS DESK
TIMES OF BENGALURU