ಬೆಂಗಳೂರು: ಕಾವಲುಗಾರರಿಗೆ ಹಣದ ಆಸೆ ತೋರಿಸಿ, ಖಾಸಗಿ ಕಂಪನಿಯೊಂದರಲ್ಲಿ ಲ್ಯಾಪ್ಟಾಪ್ ಕದಿಯಲು ಒಪ್ಪಂದ ಮಾಡಿಕೊಂಡು 38 ಲ್ಯಾಪ್ಟಾಪ್ಗಳನ್ನು ತರಿಸಿಕೊಂಡಿದ್ದ ಆರೋಪಿಯನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ. ಬಾಪೂಜಿನಗರದಲ್ಲಿ ವಾಸವಿರುವ ಖಾಸಗಿ ಕಂಪನಿ ಉದ್ಯೋಗಿ ಮುಬಾರಕ್ (26) ಬಂಧಿತ ಆರೋಪಿ. ಲ್ಯಾಪ್ಟಾಪ್ ಕದ್ದು ತಂದಿದ್ದ ಕಾವಲುಗಾರ ಹೃಷಿಕೇಶ್ ಸಾಹು (27) ಸದ್ಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಪ್ರಿಂಟರ್ ಮತ್ತು ಸ್ಕ್ಯಾನರ್ ರಿಪೇರಿಗಾಗಿ ಮುಬಾರಕ್, ಕಾವಲುಗಾರ ಕೆಲಸ ಮಾಡಿಕೊಂಡಿದ್ದ ಮತ್ತೊಂದು ಕಂಪನಿಗೆ ಬರುತ್ತಿದ್ದ. ಈ ವೇಳೆ ಹೃಷಿಕೇಶ್ ಸಾಹುನನ್ನು ಪರಿಚಯಿಸಿಕೊಂಡು, ತಮ್ಮ ಕಂಪನಿಯಿಂದ ಲ್ಯಾಪ್ಟಾಪ್ ಕಳವು ಮಾಡಿ ನೀಡುವಂತೆ ಹೇಳಿದ್ದ. ಹಣದ ಆಸೆಗಾಗಿ ಹೃಷಿಕೇಶ್ ಹಲವಾರು ಲ್ಯಾಪ್ಟಾಪ್ಗಳನ್ನು ಕದ್ದು ಮುಬಾರಕ್ಗೆ ನೀಡಿದ್ದ. ಕದ್ದ ಲ್ಯಾಪ್ಟಾಪ್ ಒಂದಕ್ಕೆ ಎರಡು ಅಥವಾ ಮೂರು ಸಾವಿರ ಹಣ ನೀಡಿ ಖರೀದಿಸುತ್ತಿದ್ದ ಎಂದು ಮಾಹಿತಿ ನೀಡಿದರು. 20 ಲಕ್ಷ ಬೆಲೆಬಾಳುವ 38 ಕದ್ದ ಲ್ಯಾಪ್ಟಾಪ್ಗಳನ್ನು ವಶಕ್ಕೆ ಪಡೆಯಲಾಗಿದೆ.
NEWS DESK
TIMES OF BENGALURU