ರೈತರಿಗೆ ಕೆ-ಕಿಸಾನ್ ನೋಂದಣಿ ಕಡ್ಡಾಯ

ಬೆಂಗಳೂರು: ಕೃಷಿ ಇಲಾಖೆಯು ರೈತ ಸಮುದಾಯಕ್ಕೆ ಮಹತ್ವದ ಮಾಹಿತಿಯೊಂದು ನೀಡಿದೆ. ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯ ಪಡೆಯಬೇಕಾದರೆ ಕೆ-ಕಿಸಾನ್ ತಂತ್ರಾಂಶ ಯೋಜನೆಯಲ್ಲಿ ರೈತರು ಹೆಸರು ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿದೆ. ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯ ಪಡೆಯಲು ಪದೇ ಪದೇ ದಾಖಲೆ ನೀಡುವುದನ್ನು ತಪ್ಪಿಸಲು ರಾಜ್ಯ ಸರ್ಕಾರವು ಕೆ-ಕಿಸಾನ್ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದೆ.

ಈ ಕೆ-ಕಿಸಾನ್ ತಂತ್ರಾಂಶದಲ್ಲಿ ರೈತ ಕುಟುಂಬದ ಸದಸ್ಯರ ಹೆಸರು, ಬೆಳೆ ಮಾಹಿತಿ, ಭೂಮಿ, ಆಧಾರ್ ನಂಬರ್, ಬ್ಯಾಂಕ್ ಖಾತೆ ಸಂಖ್ಯೆ, ಮಣ್ಣಿನ ಗುಣಮಟ್ಟ ಮುಂತಾದ ಮಾಹಿತಿ ಕಲೆ ಹಾಕಿ ಅಪ್ಲೋಡ್ ಮಾಡಲಾಗುತ್ತದೆ. ಅದರ ಆಧಾರದ ಮೇಲೆ ರೈತನ ಹೆಸರಿಗೆ ಯುನೀಕ್ ಐಡಿ ಕಾರ್ಡ್ ನೀಡಲಾಗುತ್ತದೆ. ಕೃಷಿ ಇಲಾಖೆಯ ಯಾವುದೇ ಸೌಲಭ್ಯ ಪಡೆಯಲು ಈ ಕಾರ್ಡ್ ಅಗತ್ಯ. ರೈತರು ಕೆ-ಕಿಸಾನ್ ತಂತ್ರಾಂಶದಡಿಯಲ್ಲಿ ರೈತರು ನೋಂದಣಿ ಮಾಡಿಕೊಳ್ಳದೇ ಇದ್ದಲ್ಲಿ, ರೈತರಿಗೆ ಯಾವುದೇ ಸಹಾಯಧನ ಸೌಲಭ್ಯ ದೊರೆಯುವುದಿಲ್ಲ. ಕೃಷಿ ಇಲಾಖೆಯಲ್ಲಿ ದೊರೆಯುವ ಬಿತ್ತನೆ ಬೀಜಗಳು, ಕೃಷಿ ಯಂತ್ರೋಪಕರಣಗಳು, ತುಂತುರು ನೀರಾವರಿ, ಆಧುನಿಕ ಕೃಷಿ ಉಪಕರಣಗಳು ಹಾಗೂ ಇಲಾಖೆಯ ಇತರೆ ಸೌಲಭ್ಯಗಳನ್ನು ಪಡೆಯಲು ಕೆ-ಕಿಸಾನ್ ನಲ್ಲಿ ಆನ್ ಲೈನ್ ನೋಂದಣಿ ಕಡ್ಡಾಯವಾಗಿದೆ.

NEWS DESK
TIMES OF BENGALURU