ಮಹಿಳೆಯರಿಗೆ ಸಿಹಿ ಸುದ್ದಿ; ವಿ.ಸೋಮಣ್ಣ ಘೋಷಣೆ

ಬೆಂಗಳೂರು: ಹೆಣ್ಣು ಮಗು ಹೆತ್ತ ತಾಯಿ-ತಂದೆಗೆ ಯಾವುದೇ ಹೊರೆಯಾಗದೇ ಮತ್ತು ಅವರ ಪಾಲನೆಗೆ ಉತ್ತೇಜನ ನೀಡಲು ಭಾಗ್ಯಲಕ್ಷೀ ಬಾಂಡ್ ಗಳನ್ನು ವಿತರಿಸಲಾಗುತ್ತಿದೆ. ಬೆಂಗಳೂರಿನ ಸೂರ್ಯನಗರದಲ್ಲಿ 600 ಎಕರೆ ಜಾಗದಲ್ಲಿ ಶೇ. 50 ರಷ್ಟು ಸೈಟ್ ಗಳನ್ನು ಮಹಿಳೆಯರಿಗೆ ಮೀಸಲಿಡಲಾಗುವುದು ಎಂಬುವುದಾಗಿ ವಸತಿ ಸಚಿವ ವಿ. ಸೋಮಣ್ಣ ತಿಳಿಸುವ ಮೂಲಕ ಮಹಿಳೆಯರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ್ದಾರೆ. ಇಂದು ಸಿ.ಎಫ್.ಆರ್.ಐ ಮತ್ತು ಗೋವಿಂದರಾಜನಗರ ಮಂಡಲ ಮಹಿಳಾ ಮೋರ್ಚಾ ಸಹಯೋಗದಲ್ಲಿ 500 ಮಹಿಳೆಯರಿಗೆ ಭಾಗ್ಯಲಕ್ಷ್ಮೀ ಭಾಂಡ್ ಮತ್ತು ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಬಡವರಿಗೆ ಬೇಕಾದ ಸೌವಲತ್ತು ಬಡವರಿಗೆ ತಲುಪುವಂತೆ ನೋಡಿಕೊಳ್ಳಬೇಕು.

ಮಹಿಳೆಯರು ಪುರುಷರಷ್ಟೇ ಶಕ್ತಿವಂತರು ಎಂದು ರೂಪಿಸಿದ್ದಾರೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ, ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಭಾಗ್ಯ ಲಕ್ಷ್ಮೀ ಬಾಂಡ್ ಮತ್ತು ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ವಿತರಣಾ ಹಾಗೂ ಪಡಿತರ ಚೀಟಿ, ವೃದ್ದಾಪ್ಯ ವೇತನ ಪ್ರಮಾಣಪತ್ರ ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಅರ್ಹ ಫಲಾನುಭವಿಗಳಿಗೆ ವಿತರಣಾ ಸಮಾರಂಭವನ್ನು ವಸತಿ ಸಚಿವರಾದ ವಿ.ಸೋಮಣ್ಣರವರು ವಿತರಿಸಿದರು. ಈ ಕಾರ್ಯಕ್ರಮದಲ್ಲಿ ಕಾರ್ಮಿಕ ವಲಯದ ಆಯುಕ್ತರು ಹಾಗೂ ಬಿಬಿಎಂಪಿ ಸದಸ್ಯರು ಇನ್ನು ಮುಂತಾದವರು ಭಾಗವಹಿಸಿದ್ದರು.

NEWS DESK
TIMES OF BENGALURU