ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ಬೆಂಗಳೂರು : ನಗರದ ಬಿಸಿಎಂಪಿ ಲೇಔಟ್ ನಲ್ಲಿ ಇಂದು ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಪ್ರಕಟಿಸಿದೆ. ಸರಣಿ ಟ್ವೀಟ್ ಮೂಲಕ ವಿದ್ಯುತ್ ವ್ಯತ್ಯಯದ ಬಗ್ಗೆ ತಿಳಿಸಿದ ಬೆಸ್ಕಾಂ, ಚನ್ನಮ್ಮನ ತೋಟ, ರಘುವನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತೆ ಎಂದಿದೆ.

ಬೈದರಹಳ್ಳಿ ಮುಖ್ಯರಸ್ತೆ, ಬೈಯಪ್ಪನಹಳ್ಳಿ, ತುಂಗಾ ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂದು ಬೆಸ್ಕಾಂ ಹೇಳಿದೆ. ಇದರ ಪಕ್ಕದಲ್ಲಿಯೇ ಕೆಂಪೇಗೌಡ ನಗರ, ಟಿ. ದಾಸರಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲೂ ಮಾರ್ಚ್ 20ರಂದು ವಿದ್ಯುತ್ ಕಡಿತವಾಗಲಿದೆ ಎಂದಿದೆ. ಇನ್ನು ಸಂಜೆ 5 ರಿಂದ 5.30ರವರೆಗೆ ಎಲ್ಲಾದರೂ ವಿದ್ಯುತ್ ಮರುಸ್ಥಾಪಿಸಲಾಗುವುದು ಎಂದಿದೆ.

NEWES DESK

TIMES OF BENGALURU