ಕೋವಿಡ್ ಹಾಟ್ ಸ್ಪಾಟ್ ಆಗುತ್ತಾ ಬೆಂಗಳೂರು..?

ಬೆಂಗಳೂರು : ಒಂದೆಡೆ ಕೋವಿಡ್ ಅಲೆ ಕಡಿಮೆಯಾಗುತ್ತಿದೆ ಎಂದು ರಾಜ್ಯದ ಜನತೆ ಮೈಮರೆಯುತ್ತಿದ್ದಾರೆ. ಮತ್ತೊಂದೆಡೆ ಕೋವಿಡ್ ಎರಡನೇ ಅಲೆಯ ಅಟ್ಟಹಾಸದ ಮುನ್ಸೂಚನೆ ರಾಜ್ಯದಲ್ಲಿ ಎದ್ದಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಎರಡನೇ ಅಲೆಯ ಅಟ್ಟಹಾಸ ಶುರುವಾಗಿದ್ದು. ಬೆಂಗಳೂರು ಮತ್ತೆ ಕೋವಿಡ್ ಹಾಟ್ ಸ್ಪಾಟ್ ಆಗುತ್ತಾ? ಎನ್ನುವ ಸಂದೇಹಕ್ಕೂ ಎಡೆ ಮಾಡಿಕೊಟ್ಟಿದೆ.

ಮತ್ತೆ ಬೆಂಗಳೂರು ಕೋವಿಡ್ ಹಾಟ್ ಸ್ಪಾಟ್ ಆಗುತ್ತಾ? ಎಂಬ ಪ್ರಶ್ನೆಯನ್ನು ಹುಟ್ಟು ಹಾಕುವಂತ ಮಾಹಿತಿಯನ್ನು ತಜ್ಞರು, ಹೊರ ಹಾಕಿದ್ದಾರೆ. ಮುಂದಿನ ವಾರದಿಂದ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆಗೂ ಮುನ್ನವೇ ನಿಯಂತ್ರಣಕ್ಕೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ತಜ್ಞರು, ರಾಜ್ಯ ಸರ್ಕಾರಕ್ಕೆ, ಸೂಚನೆ ನೀಡಿದ್ದಾರೆ.

ಅಂದ ಹಾಗೆ ಬೆಂಗಳೂರಿನಲ್ಲಿ ನೆನ್ನೆ 1037 ಜನರಿಗೆ ಕೋವಿಡ್ ಪಾಸಿಟಿವ್ ಧೃಡಪಟ್ಟಿತ್ತು. 530 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಅಲ್ಲದೆ ಇದೀಗ ನಗರದಲ್ಲಿ 8,623 ಸಕ್ರಿಯ ಕೋವಿಡ್ ಸೋಂಕಿತರಿದ್ದಾರೆ. ರಾಜ್ಯಾದ್ಯಂತ 12,067 ಸಕ್ರಿಯ ಸೋಂಕಿತರಿದ್ದಾರೆ. ಈ ಸಂಖ್ಯೆ ಮುಂದಿನ ವಾರ ಏರುಗತಿಯಲ್ಲಿ ಸಾಗಲಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಬೆಂಗಳೂರು ಮತ್ತೆ ಕೋವಿಡ್ ಹಾಟ್ ಸ್ಪಾಟ್ ಆಗುತ್ತಾ? ಎಂಬ ಆತಂಕಕ್ಕೂ ಕಾರಣವಾಗಿದೆ.

NEWS DESK

TIMES OF BENGALURU