ಕೋವಿಡ್ ಹೆಚ್ಚಳ ವಲಸಿಗರನ್ನು ಕೇಳೋರಿಲ್ಲ..?

ಬೆಂಗಳೂರು : ನಿನ್ನೆಯಷ್ಟೇ ಬಿಬಿಎಂಪಿ ( ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ) ಆಯುಕ್ತ ಎನ್. ಮಂಜುನಾಥ್ ಪ್ರಸಾದ್, ಅವರು ಕೋವಿಡ್ ತಡೆಗಟ್ಟಿ ನಗರದಲ್ಲಿರುವ ಆತಂಕವನ್ನು ನಿವಾರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದಾಗಿ ಹೇಳಿದ್ದರು. ಆದರೆ ಹೊರ ರಾಜ್ಯಗಳಿಂದ ಪ್ರವಾಸಿಗರು, ಬರುತ್ತಲೇ ಇದ್ದಾರೆ. ಇವರನ್ನು ಕೇಳುವವರೇ ಇಲ್ಲ.

ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಪ್ರತಿನಿತ್ಯ ಹೊರ ರಾಜ್ಯಗಳಿಂದ ಸಾಕಷ್ಟು ಮಂದಿ, ಬರುತ್ತಿದ್ದಾರೆ. ಆದರೆ ಇವರ, ಬಳಿ ಕೋವಿಡ್ ನೆಗಟಿವ್ ವರದಿ ಇಲ್ಲ. ಜೊತೆಗೆ ಯಾವುದೇ ಅಧಿಕಾರಿಗಳು, ಇವರನ್ನು ಪ್ರಶ್ನೆ ಮಾಡುತ್ತಿಲ್ಲ. ಕೋವಿಡ್ ತಡೆಯುವಲ್ಲಿ ಬಿಬಿಎಂಪಿ ನಿಯಂತ್ರಣ ಕಳೆದುಕೊಂಡಿದೆ. ರೈಲುಗಳ ಮೂಲಕವಷ್ಟೇ ಅಲ್ಲ. ಬಸ್ಸುಗಳ ಮೂಲಕವೂ ಕೇರಳ, ಮಹಾರಾಷ್ಟ್ರ, ಸೇರಿದಂತೆ ವಿವಿಧ ರಾಜ್ಯಗಳಿಂದ ಜನ, ಬರುತ್ತಿದ್ದಾರೆ. ಆ ರಾಜ್ಯಗಳಲ್ಲಿ ಈಗಾಗಲೇ ಕೋವಿಡ್ ಮಿತಿಮೀರಿದೆ.

ಮುಖ್ಯವಾಗಿ ಕೋವಿಡ್ ಸಂದರ್ಭದಲ್ಲಿ ಬರುತ್ತಿರುವ ಪ್ರಯಾಣಿಕರಿಗೆ, ಬ್ರೇಕ್ ಇಲ್ಲದಂತಾಗಿದೆ. ಕೇರಳ ಮತ್ತು ಮಹಾರಾಷ್ಟ್ರದಿಂದಲೇ ನಮ್ಮ, ರಾಜ್ಯಕ್ಕೆ ಸಂಕಷ್ಟ ಎಂದು ಸರ್ಕಾರವೇ ಹೇಳಿದೆ. ಜೊತೆಗೆ ಕೇರಳದಿಂದ ಬರುವವರಿಗೆ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಿ ವರದಿ ತರಬೇಕೆಂದು ಆದೇಶ ಕೊಟ್ಟಿದೆ. ಇಷ್ಟೆಲ್ಲ ಆದರೂ ಬಿಬಿಎಂಪಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಗರ ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿ ಹೊರ ರಾಜ್ಯಗಳಿಂದ ಬರುವವರ, ನೆಗಟಿವ್ ರಿಪೋರ್ಟ್ ಕೇಳುವವರೇ, ಇಲ್ಲದಂತಾಗಿದೆ. ನಗರದಲ್ಲಿ ಕೋವಿಡ್ ಸ್ಫೋಟವಾಗುವ ಮುನ್ನಾ ಸರ್ಕಾರ ಹಾಗೂ ಬಿಬಿಎಂಪಿ ಅಧಿಕಾರಿಗಳು, ಎಚ್ಚೆತ್ತುಕೊಳ್ಳಬೇಕು. ಸೋಂಕು ತಡೆಯಲು ಸಮರೋಪಾದಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

NEWS DESK

TIMES OF BENGALURU