ಆರ್​ಎಸ್​ಎಸ್ ​ಗೆ ರಾಮಮಾಧವ್ ವಾಪಸ್

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆವರೆಗೆ ಹೊಣೆಗಾರಿಕೆ ನಿರ್ವಹಿಸಿದ್ದ ರಾಮಮಾಧವ್ ಅವರನ್ನು ಬಿಜೆಪಿಯಿಂದ ಪುನಃ ಆರ್​ಎಸ್​ಎಸ್​ಗೆ ನಿಯುಕ್ತಿ ಮಾಡಲಾಗಿದೆ. ಆರ್​ಎಸ್​ಎಸ್​ನ ಪ್ರಚಾರಕರಾಗಿರುವ ರಾಮಮಾಧವ್ ಅವರನ್ನು 2014 ರಲ್ಲಿ ಬಿಜೆಪಿಗೆ ನಿಯುಕ್ತಿ ಮಾಡಲಾಗಿತ್ತು. ಇದೀಗ ಮಾತೃಸಂಸ್ಥೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರನ್ನಾಗಿ ನಿಯುಕ್ತಿ ಮಾಡಲಾಗಿದೆ. ಆರ್​ಎಸ್​ಎಸ್​ನ ವೈಚಾರಿಕ ವಿಚಾರಗಳನ್ನು ಅವರು ನಿರ್ವಹಿಸಲಿದ್ದಾರೆ.

NEWS DESK
TIMES OF BENGALURU