ಬೆಂಗಳೂರಿಗೆ ಭೇಟಿ ನೀಡಲಿರುವ ಯುಕೆ ಪ್ರಧಾನಿ

ಬೆಂಗಳೂರು : ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಬೆಂಗಳೂರು, ಪುಣೆ, ಮುಂಬೈ ಹಾಗೂ ಚೆನ್ನೈಗೆ ಭೇಟಿ ನೀಡಲಿದ್ದಾರೆ, ಈ ಮೊದಲು ಗಣರಾಜ್ಯೋತ್ಸವ ಪರೇಡ್‍ಗೆ ಬೋರಿಸ್ ಜಾನ್ಸನ್ ಮುಖ್ಯ ಅತಿಥಿಯಾಗಿ ಆಗಮಿಸಬೇಕಿತ್ತು. ಆದರೆ ಕೊರೊನಾದಿಂದಾಗಿ ಭಾರತ ಭೇಟಿಯನ್ನು ಮುಂದೂಡಲಾಗಿತ್ತು.

ಮುಂಬರುವ ವರ್ಷಗಳಲ್ಲಿ ಬ್ರಿಟನ್ ಸರಕಾರದ ನೀತಿಯ ಸಮಗ್ರ ವಿಮರ್ಶೆಯ ಭಾಗವಾಗಿ ಇಂಡೋ-ಪೆಸಿಫಿಕ್ ಪ್ರದೇಶದತ್ತ ತನ್ನ ಗಮನವನ್ನು ಹರಿಸಲಿದೆ. ಈ ಪ್ರದೇಶವು ವಿಶ್ವದ ಭೌಗೋಳಿಕ ರಾಜಕೀಯ ಕೇಂದ್ರವನ್ನು ಹೆಚ್ಚು ಪ್ರತಿನಿಧಿಸುತ್ತಿರುವ ಹಿನ್ನೆಲೆ, ಇಂಡೋ-ಪೆಸಿಫಿಕ್ ಪ್ರದೇಶದತ್ತ ಹೆಚ್ಚಿನ ಗಮನ ಹರಿಸಲಿದೆ ಎಂದು ಅಲ್ಲಿನ ಸರಕಾರ ಹೇಳಿದೆ. ಹೀಗಾಗಿ ಮೋದಿ ಹಾಗೂ ಜಾನ್ಸನ್ ಮಾತುಕತೆಯಲ್ಲಿ ಇಂಡೋ-ಪೆಸಿಫಿಕ್ ಪ್ರದೇಶದ ಬಗ್ಗೆ ಜಾಸ್ತಿ ಮಾತುಕತೆ ನಡೆಯಲಿದೆ ಎಂದು ತಿಳಿದುಬಂದಿದೆ.

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಬಲ ಪ್ರದರ್ಶನಕ್ಕೂ ಒತ್ತು ನೀಡುವ ಬಗ್ಗೆ ಚರ್ಚೆ ಸಾಧ್ಯತೆ ಇದೆ. ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಮಾತುಕತೆಯನ್ನು ಚುರುಕುಗೊಳಿಸುವ ಪ್ರಯತ್ನಗಳ ಭಾಗವಾಗಿ ಜಾನ್ಸನ್ ಜನವರಿಯಲ್ಲಿ ಭಾರತೀಯ ಪ್ರವಾಸವನ್ನು ಯೋಜಿಸಿದ್ದರು.

NEWS DESK

TIMES OF BENGALURU