ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಹಾಕದಿದ್ರೆ ದಂಡ ಫಿಕ್ಸ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಅಬ್ಬರ ಶುರುವಾಗಿದೆ. ಇದರಿಂದಾಗಿ ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮತ್ತಷ್ಟು ಕಠಿಣ ನಿಲುವನ್ನು ಕೈಗೊಂಡಿದೆ. ಇದುವರೆಗೆ ಮಾಸ್ಕ್ ಕಡ್ಡಾಯವಿದ್ದರೂ ಅನೇಕರು ಧರಿಸುತ್ತಿಲ್ಲ. ಆದ್ರೇ.. ಇನ್ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಮಾಸ್ಕ್ ಹಾಕದಿದ್ದರೆ ದಂಡವನ್ನು ತೆರಬೇಕಾಗುತ್ತದೆ.

ರಾಜ್ಯ ರಾಜಧಾನಿಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರಕ್ಕೆ ತಾಂತ್ರಿಕ ತಜ್ಞರ ಸಮಿತಿಯು ಲಾಕ್ ಡೌನ್ ಅಂತ ತೀರ್ಮಾನ ಕೈಗೊಳ್ಳುವಂತೆಯೂ ಸಲಹೆ ನೀಡಿದೆ. ಜೊತೆಗೆ ಶಾಲಾ-ಕಾಲೇಜು ಬಂದ್ ಮಾಡುವಂತೆಯೂ ಸೂಚಿಸಿದೆ ಎನ್ನಲಾಗಿದೆ. ಆದ್ರೇ ರಾಜ್ಯ ಸರ್ಕಾರ ಮಾತ್ರ ಆ ಯಾವುದೇ ನಿಲುವು ತಳೆಯದೇ ಕೊರೊನಾ ನಿಯಂತ್ರಣ ಕ್ರಮದ ಟಫ್ ರೂಲ್ಸ್ ಗಳು ಜಾರಿಗೆ ತರಲಾಗಿದೆ. ಇದರ ಭಾಗವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಹಾಕುವಂತೆ ಮತ್ತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಖಡಕ್ ಸೂಚನೆ ನೀಡಿದ್ದಾರೆ. ಹೀಗಾಗಿ ಸಾರ್ವಜನಿಕರು ಇನ್ಮುಂದೆ ಕಡ್ಡಾಯವಾಗಿ ಮಾಸ್ಕ್ ಧರಿಸೋದು ಮರೆಯ ಬೇಡಿ. ಇಲ್ಲ ಅಂದ್ರೆ ದಂಡವನ್ನು ಕಟ್ಟಬೇಕಾಗುತ್ತದೆ.

NEWS DESK
TIMES OF BENGALURU