ಶಿವರಾಜ್ ಕುಮಾರ್ ಗೆ ಗನ್ ಮ್ಯಾನ್ ನೀಡಿದ ರಾಜ್ಯ ಸರ್ಕಾರ

ಬೆಂಗಳೂರು: ನಟ ಶಿವರಾಜ್ ಕುಮಾರ್ ಅವರಿಗೆ ಜೀವ ಬೆದರಿಕೆ ಇದೆ ಎಂದು ಸಾಮಾಜಿಕ ಕಾರ್ಯಕರ್ತೆ ಬಿ.ಟಿ. ಲಲಿತಾ ನಾಯಕ್ ಸ್ಫೋಟಕ ಹೇಳಿಕೆ ನೀಡಿದ ಬೆನ್ನಲ್ಲೇ ರಾಜ್ಯ ಸರ್ಕಾರವು ಶಿವರಾಜ್ ಕುಮಾರ್ ಭದ್ರತೆಗಾಗಿ ಗನ್ ಮ್ಯಾನ್ ನೀಡಿದೆ. ನಟ ಶಿವರಾಜ್ ಕುಮಾರ್ ಭದ್ರತೆ ಬಗ್ಗೆ ಹೆಚ್ಚು ಒತ್ತು ನೀಡಿರುವ ಗೃಹ ಸಚಿವಾಲಯ ಹೆಚ್ಚಿನ ಭದ್ರತೆಯನ್ನು ಒದಗಿಸಿದೆ. ಎರಡು ಪಾಳಯದಲ್ಲಿ ನಾಲ್ಕು ಪೊಲೀಸರು ಹಾಗೂ ಗನ್ ಮ್ಯಾನ್ ಗಳನ್ನು ನಿಯೋಜನೆ ಮಾಡಿದೆ.

NEWS DESK
TIMES OF BENGALURU