ಮರಗಳನ್ನು ಉಳಿಸಲು ಮಾನವ ಸರಪಳಿ

ಬೆಂಗಳೂರು: ಬಿಬಿಎಂಪಿಯು ಅಂಡರ್ ಪಾಸ್ ನಿರ್ಮಾಣಕ್ಕಾಗಿ ಎಚ್‍ಎಎಲ್ ಜಂಕ್ಷನ್‍ನಲ್ಲಿರುವ ಮರಗಳನ್ನು ಕಡಿಯಲು ಹೊರಟಿದೆ. ಇದನ್ನು ವಿರೋಧಿಸಿ ಸ್ಥಳೀಯರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಬಿಬಿಎಂಪಿ 25 ಮರಗಳನ್ನು ಕಡಿಯಲು ಯೋಜನೆ ರೂಪಿಸಿದೆ. ಅದಕ್ಕಾಗಿ ಬೆಂಗಳೂರಿನ ಓಲ್ಡ್ ಏಪೋರ್ಟ್ ರಸ್ತೆ ಹಾಗೂ ಸುರಂಜನ್ ದಾಸ್ ರಸ್ತೆ ಜಂಕ್ಷನ್ ಸುತ್ತಮುತ್ತಲಿನ ನಿವಾಸಿಗಳು ಪ್ರತಿಭಟನೆ ನಡೆಸಿದರು.

ಭಾನುವಾರ ಸುಮಾರು 150 ರಿಂದ 200 ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಇಲ್ಲಿ ಮರಗಳನ್ನು ಕಡಿಯದೆ ಅಂಡರ್ ಪಾಸ್ ನಿರ್ಮಿಸಲು ದಾರಿ ಇದೆ. ಸುಮರು 70-80 ವರ್ಷ ಹಳೆಯ ಮರಗಳನ್ನು ಕಡಿಯಲಾಗುತ್ತಿದೆ. ಸಮಿತಿಯು ಹೇಗೆ ಇದಕ್ಕೆ ಒಪ್ಪಿಗೆ ನೀಡಿತು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ ಎಂದು ಸ್ಥಳೀಯರು ತಿಳಿಸಿದರು.

NEWS DESK
TIMES OF BENGALURU