ಮೀಸಲಾತಿ ಪ್ರಮಾಣ ಏರಿಕೆಗೆ ಗ್ರೀನ್ ಸಿಗ್ನಲ್

ಬೆಂಗಳೂರು : ಜನಸಂಖ್ಯೆ ಅನುಗುಣವಾಗಿ, ಬೇಡಿಕೆಗೆ ಪೂರಕವಾಗಿ ಮೀಸಲಾತಿ ಪ್ರಮಾಣ ಏರಿಕೆಗೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ ಮೀಸಲಾತಿ ಪ್ರಮಾಣ ಏರಿಕೆಯ ನಿರೀಕ್ಷೆಯಲ್ಲಿದ್ದಂತ ಸಮುದಾಯಕ್ಕೆ ಗುಡ್ ನ್ಯೂಸ್ ನೀಡಲು ಮುಂದಾಗಿದೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಇಂದು ನಡೆದಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ, ಮೀಸಲಾತಿ ಪ್ರಮಾಣ ಶೇ.50ಕ್ಕಿಂತ ಹೆಚ್ಚು ಮಾಡಲು ಸಮ್ಮತಿ ನೀಡಿದೆ. ಅಡ್ವೋಕೇಟ್ ಜನರಲ್ ಸಿದ್ಧಪಡಿಸಿದ ಪ್ರಮಾಣ ಪತ್ರಕ್ಕೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಇದರಿಂದಾಗಿ, ರಾಜ್ಯ ಸರ್ಕಾರದಿಂದ ಮೀಸಲಾತಿ ಪ್ರಮಾಣ ಏರಿಕೆಗೆ ಗ್ರೀನ್ ಸಿಗ್ನಲ್ ನೀಡಿದಂತೆ ಆಗಿದೆ.

ಜನಸಂಖ್ಯೆಯ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಹಿಂದುಳಿದ ಸಮುದಾಯಗಳು ಮೀಸಲಾತಿಗೆ ಬೇಡಿಕೆ ಮಂಡಿಸಿವೆ. ಬೇಡಿಕೆಗೆ ಪೂರಕವಾಗಿ ಮೀಸಲಾತಿ ಪ್ರಮಾಣ ಏರಿಕೆ ಮಾಡಬೇಕಾಗಿದೆ ಎಂಬುದಾಗಿ ಅಡ್ವೋಕೇಟ್ ಜನರಲ್ ಸಿದ್ದಪಡಿಸಿದಂತ ಪ್ರಮಾಣ ಪತ್ರಕ್ಕೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ್ದು, ಸಂಜೆಯೊಳಗೆ ಸುಪ್ರೀಂಗೆ ತನ್ನ ನಿರುವನ್ನು ರಾಜ್ಯ ಸರ್ಕಾರ ಸಲ್ಲಿಸಲಿದೆ.

 

NEWS DESK

TIMES OF  BENGALURU