ವಿಧಾನಸಭೆಯಲ್ಲಿ ಸಿಡಿ ಸದ್ದು

ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕುರಿತಂತೆ ಇದೀಗ ರಾಜ್ಯ ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಸ್ಪೀಕರ್ ಸಿಡಿ ಪ್ರಕರಣದ ಮೇಲಿನ ಚರ್ಚೆಗೆ ಸ್ಪೀಕರ್ ಅವಕಾಶ ನೀಡುತ್ತಿದ್ದಂತೆ, ಇಂದು ಮಧ್ಯಾಹ್ನ ಕಲಾಪ ಆರಂಭವಾಗುತ್ತಿದ್ದಂತೆ, ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಿಡಿ ಪ್ರಕರಣದ ಬಗ್ಗೆ ಚರ್ಚೆ ಪ್ರಸ್ತಾಪಿಸಿದರು.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕುರಿತಂತೆ ಪ್ರಸ್ತಾಪಿಸಿದಂತ ಅವರು, ಸಿಡಿ ಬಿಡುಗಡೆಗೂ ಮುನ್ನವೇ, ಕಬ್ಬನ್ ಪಾರ್ಕ್ ಠಾಣೆಗೆ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುತ್ತಾರೆ. ಆದ್ರೇ ದೂರು ನೀಡಿದ್ರೂ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳೋದಿಲ್ಲ. ಇದಾದ ಬಳಿಕ ಅದು ನಕಲಿ ಹಾಗೇ ಹೀಗೆ ಎನ್ನುವಂತೆ ಸುದ್ದಿಗೋಷ್ಠಿಯಲ್ಲಿ ರಮೇಶ್ ಜಾರಕಿಹೊಳಿ, ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಹೇಳುತ್ತಾರೆ.

ಇದಾದ ಬಳಿಕ, ಈ ಸಂಬಂಧ ಸಿಡಿ ರಿಲೀಸ್ ಮಾಡಿದಂತ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿಯನ್ನು ವಿಚಾರಣೆಗೆ ಪೊಲೀಸರು ಕರೆಯುತ್ತಾರೆ. ವಿಚಾರಣೆಗೆ ವಕೀಲರ ಜೊತೆಗೆ ಹಾಜರಾಗಿ, ಹೇಳಿಕೆ ನೀಡಿದ್ದಾರೆ. ಇದೆಲ್ಲಾ ಆದ್ರೂ ಪೊಲೀಸರು ಮಾತ್ರ ರಮೇಶ್ ಜಾರಕಿಹೊಳಿ ವಿರುದ್ಧ ಎಫ್‍ಐಆರ್ ದಾಖಲಿಸೋದೇ ಇಲ್ಲ. ಇದೆಲ್ಲದ ನಂತ್ರ, ನೈತಿಕತೆಯ ಹೊಣೆ ಹೊತ್ತು ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುತ್ತಾರೆ.

ಹೀಗೆ ರಾಜೀನಾಮೆ ನೀಡಿದ ಬಳಿಕ, ಹಾಲಿ 6 ಸಚಿವರು ಕೂಡ ಸೆಷನ್ ಕೋರ್ಟ್ ನ ಮೊರೆ ಹೋಗಿ, ತಮ್ಮ ವಿರುದ್ಧದ ಯಾವುದೇ ಸುದ್ದಿಯನ್ನು ಪ್ರಸಾರ ಮಾಡದಂತೆ ಇಂಜೆಕ್ಷನ್ ಆದೇಶ ಪಡೆದಿರುತ್ತಾರೆ. ಕುಂಬಳಕಾಯಿ ಕಳ್ಳ ಅಂದ್ರೆ. ಹೆಗಲು ಮುಟ್ಟಿಕೊಟ್ಟಂತೆ ನಡೆದುಕೊಂಡಿದ್ದಾರೆ. ಯಾವುದೇ ಭಯವಿಲ್ಲದೇ ಸಚಿವರಾಗಿ ಕಾರ್ಯನಿರ್ವಹಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಿದಂತ ಇವರು, ನ್ಯಾಯಾಲಯದ ರಕ್ಷಣೆ ಯಾಕ್ ಹೋಗಬೇಕು. ಇಂತವರು ಹೇಗೆ ಜನರಿಗೆ ರಕ್ಷಣೆ ನೀಡುತ್ತಾರೆ. ಅವರಿಗೆ ರಕ್ಷಣೆ ಇಲ್ಲ ಎಂದಾದರೇ ಜನರಿಗೆ ರಕ್ಷಣೆ ಎಲ್ಲಿದೆ.? ಎಂದರು.

NEWS DESK

TIMES OF BENGALURU