ಇನ್ನು ಪತ್ತೆಯಾಗದ ಸಿಡಿ ಆರೋಪಿಗಳು

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣದ ಶಂಕಿತ ಆರೋಪಿಗಳು ಕೈಗೆ ಸಿಗದೆ ಎಸ್‍ಐಟಿಗೆ ಚೆಳ್ಳೆ ಹಣ್ಣು ತಿನ್ನಿಸುತ್ತಿದ್ದಾರೆ. ಎಸ್‍ಐಟಿ ರಚನೆಯಾದ ದಿನದಿಂದ ಶಂಕಿತ ವ್ಯಕ್ತಿಗಳು ಮತ್ತು ಯುವತಿಗಾಗಿ ಪೊಲೀಸರು ಶೋಧ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಶಂಕಿತ ವ್ಯಕ್ತಿಗಳು ತಾವು ಇರುವ ಸ್ಥಳದ ಬಗ್ಗೆ ಒಂದೇ ಒಂದು ಸುಳಿವು ಸಿಗದಂತೆ ಎಚ್ಚರ ವಹಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಶಂಕಿತ ವ್ಯಕ್ತಿಗಳು ಎಲ್ಲವನ್ನೂ ಬುದ್ಧಿವಂತಿಕೆಯಿಂದಲೇ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಶೋಧ ಕಾರ್ಯವನ್ನು ತೀವ್ರಗೊಳಿಸಿರುವ ಎಸ್‍ಐಟಿ ತಾಂತ್ರಿಕ ತಜ್ಞರ ಸಹಾಯ ಪಡೆದುಕೊಳ್ಳುತ್ತಿದೆ.

NEWS DESK
TIMES OF BENGALURU