ಹೋಟೆಲ್ ಮಾಲೀಕರಿಂದ ಸಿಎಂಗೆ ಪತ್ರ

ಬೆಂಗಳೂರು: ಮಾರ್ಷಲ್‍ಗಳು, ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳು ಸಣ್ಣಪುಟ್ಟ ಕಾರಣಗಳನ್ನು ಮುಂದಿಟ್ಟುಕೊಂಡು ಹೋಟೆಲ್ ಮಾಲೀಕರಿಗೆ ಸಮಸ್ಯೆ ನೀಡುತ್ತಿದ್ದಾರೆ ಎಂದು ಬೃಹತ್ ಬೆಂಗಳೂರು ಹೋಟೆಲ್‍ಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್ ದೂರಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಅವರಿಗೆ ಸಂಘದ ವತಿಯಿಂದ ಪತ್ರ ಬರೆಯಲಾಗಿದೆ.

ಮಾರ್ಷಲ್‍ಗಳು ಇತ್ತೀಚೆಗೆ ಸಣ್ಣಪುಟ್ಟ ಹೋಟೆಲ್‍ಗಳಿಗೆ ಬಂದು ತೊಂದರೆ ನೀಡುತ್ತಿದ್ದಾರೆ. ಮಲ್ಲೇಶ್ವರದ ಹೋಟೆಲ್‍ವೊಂದರಲ್ಲಿ ಕಸದ ಬುಟ್ಟಿಯಲ್ಲಿದ್ದ ಪ್ಲಾಸ್ಟಿಕ್ ತುಣುಕನ್ನು ತೋರಿಸಿ, 5 ಸಾವಿರ ದಂಡ ಹಾಕಿದ್ದಾರೆ. ಬಿಳಿಕ ಹೋಟೆಲ್‍ನ ಪರವಾನಗಿ ರದ್ದು ಮಾಡುವುದಾಗಿ ಹೆದರಿಸಿದ್ದಾರೆ. ಕೋವಿಡ್ ಹೆಸರಿನಲ್ಲಿ ಮಾರ್ಷಲ್‍ಗಳ ವರ್ತನೆ ಮಿತಿ ಮೀರಿದೆ ಎಂದು ಪಿ.ಸಿ.ರಾವ್ ಆರೋಪಿಸಿದ್ದಾರೆ. ಸರ್ಕಾರ ಸೂಚಿಸಿರುವ ನಿಯಮ ಪಾಲಿಸುತ್ತಿದ್ದರೂ ಹೋಟೆಲ್ ಮಾಲೀಕರಿಗೆ ತೊಂದರೆ ಕೊಡುವುದು ಸರಿಯಲ್ಲ. ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಬೇಕು ಎಂದು ಒತ್ತಾಹಿಸಿದ್ದಾರೆ.

NEWS DESK
TIMES OF BENGALURU