ಹಬ್ಬ, ಜಾತ್ರೆ, ಉತ್ಸವಗಳಿಗೆ ಬ್ರೇಕ್..?

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಅಬ್ಬರಿಸುತ್ತಿದೆ. ಮತ್ತೆ ಏರಿಕೆಯಾಗದಂತೆ ನಿಯಂತ್ರಣ ಕೈಗೊಳ್ಳುವ ಸಲುವಾಗಿ ರಾಜ್ಯ ಸರ್ಕಾರ ಇದೀಗ ಟಫ್ ರೂಲ್ಸ್ ಜಾರಿಗೆ ಮುಂದಾಗಿದೆ. ಅದರ ಮೊದಲ ಭಾಗವಾಗಿ ಹಬ್ಬ, ಜಾತ್ರೆ, ಉತ್ಸವಗಳಿಗೆ ಬ್ರೇಕ್ ಹಾಕಲು ಸೂಚಿಸಿದೆ ಎನ್ನಲಾಗಿದೆ.

ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಮೂಲಕ, ಕೊರೋನಾ ನಿಯಂತ್ರಿಸಲು ಹಬ್ಬ, ಜಾತ್ರೆಗೆ ಬ್ರೇಕ್ ಹಾಕೋದಕ್ಕೆ ಸರ್ಕಾರ ಮುಂದಾಗಿದೆ. ಜಾತ್ರೆ, ಉತ್ಸವಕ್ಕೆ ಸ್ಥಳೀಯರಿಗಷ್ಟೇ ಅವಕಾಶ ನೀಡಬೇಕು. ಆಯಾ ಜಿಲ್ಲೆಗಳಲ್ಲೇ ಟಫ್ ರೂಲ್ಸ್ ಜಾರಿಗೊಳಿಸುವಂತೆ ಎಲ್ಲಾ ಡಿಸಿಗಳಿಗೆ ಇಲಾಖೆ ಸೂಚನೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಮುಂದಾಗಿದೆ.

NEWS DESK

TIMES OF BENGALURU