ಬೈಕ್‍ಗೆ ಬಸ್ ಡಿಕ್ಕಿ : ಮಹಿಳೆ ಸಾವು

ಬೆಂಗಳೂರು : ಚಲಿಸುತ್ತಿದ್ದ ಬೈಕ್‍ಗೆ ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನ ದೇವನಹಳ್ಳಿ ತಾಲೂಕಿನ ಕನ್ನಮಂಗಲ ಪಾಳ್ಯ ಗೇಟ್ ಬಳಿ ನಡೆದಿದೆ. ದೇವನಹಳ್ಳಿ ಮೂಲದ ಶಕುಂತಲ (40) ವರ್ಷ ಮೃತ ದುರ್ದೈವಿ.

ಪತಿಯ ಜತೆ ಬೈಕ್‍ನಲ್ಲಿ ಏರ್‌ಪೋರ್ಟ್‌ಗೆ ಕೆಲಸಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇವರ ಪತಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ಸಾಗಿಸಲಾಗಿದೆ. ಏರ್‌ಪೋರ್ಟ್‌ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

NEWS DESK
TIMES OF BENGALURU