ಬೆಂಗಳೂರು : ದೊಣ್ಣೆಯಿಂದ ತಲೆಗೆ ಹೊಡೆದು ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಡೆದಿದೆ. ಯಾದಗಿರಿ ಮೂಲದ 38 ವರ್ಷದ ಫಿರ್ಮಾ ಕೊಲೆಯಾದ ಮಹಿಳೆ. ನಗರದಲ್ಲಿ ಕೆಲಸಕ್ಕೆ ಸೇರಿಕೊಂಡು ಪರಪ್ಪನ ಅಗ್ರಹಾರದಲ್ಲಿ ನೆಲೆಸಿದ ಫಿರ್ಮಾಳನ್ನು ಮನೆ ಕೆಲಸಕ್ಕೆ ಹೋಗಿದ್ದಾಗ ಮೆಹಬೂಬ್ ಎಂಬಾತ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಯಾದಗಿರಿಯ ಮೆಹಬೂಬ್ ಫಿರ್ಮಾಗೆ ಪರಿಚಯಸ್ಥನಾಗಿದ್ದು , ಶನಿವಾರ ಫಿರ್ಮಾ ಮನೆಗೆ ಬಂದಿದ್ದಾನೆ. ಈ ವೇಳೆ ಇಬ್ಬರ ನಡುವೆ ಜಗಳವಾಗಿ ಕೊಲೆ ಮಾಡಿ, ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
NEWS DESK
TIMES OF BENGALURU