ಕೆಂಪೇಗೌಡ ವಿಮಾನ ನಿಲ್ದಾಣ ದೇಶಕ್ಕೆ ಮಾದರಿ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದಕ್ಷಿಣ ಭಾರತದಲ್ಲೇ ಎರಡು ರನ್‍ವೇಗಳಿರುವ ಮೊದಲ ವಿಮಾನ ನಿಲ್ದಾಣ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ಮಾ.25ರಿಂದ ಎರಡೂ ರನ್‍ವೇ ಬಳಕೆಗೆ ಲಭ್ಯವಾಗಲಿದೆ. ರನ್‍ವೇಗೆ ಹೊಸದಾಗಿ ಮೇಲ್ಮೈ ಹಾಸು ಹಾಕುವ ಜತೆಗೆ ಎಲ್‍ಇಡಿ ರನ್‍ವೇ ಕೊನೆಯ ಲೈಟ್‍ಗಳನ್ನು ಅಳವಡಿಸುವುದು ನವೀಕರಣ ಕಾರ್ಯದಲ್ಲಿ ಸೇರಿವೆ.

ಕಡಿಮೆ ದೃಶ್ಯ ಸಾಧ್ಯತೆ ಮತ್ತು ಪ್ರತಿಕೂಲ ಹವಾಮಾನ ಸ್ಥಿತಿಗಳಲ್ಲಿ ಕಾರ್ಯಾಚರಣೆ ನಡೆಸಲು ಜವಾಹರ್‌ಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ ಜತೆಗೆ ಬೆಂಗಳೂರು ಕೇಂಪೇಗೌಡ ವಿಮಾನ ನಿಲ್ದಾಣ 2019ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ದೇಶದಲ್ಲಿ ಕ್ಯಾಟ್-3ಬಿ ರನ್‍ವೇ ಹೊಂದಿರುವ ದಕ್ಷಿಣ ಭಾರತದ ಏಕೈಕ ಹಾಗೂ ದೇಶದ 6ನೇ ವಿಮಾನ ನಿಲ್ದಾಣವಾಗಿದೆ.

NEWS DESK
TIMES OF BENGALURU