ವಿಧಾನ ಸಭೆಯಲ್ಲಿ ತಾರಕಕ್ಕೇರಿದ ಸಿಡಿ ಸಮರ

ಬೆಂಗಳೂರು : ಕಳೆದ ನಿನ್ನೆಯಿಂದ ವಿಧಾಸನಭೆಯಲ್ಲಿ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ ಕುರಿತಂತೆ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಸಚಿವರಾಗಿ ಕೋರ್ಟ್ ಮೊರೆ ಹೋದಂತ 6 ಸಚಿವರ ರಾಜೀನಾಮೆಗೂ ವಿಪಕ್ಷಗಳು ಒತ್ತಾಯಿಸಿವೆ. ಅಲ್ಲದೇ ಪ್ರಕರಣವನ್ನು ಎಸ್‍ಐಟಿ ಬದಲಾಗಿ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ನೇಮಕ ಮಾಡಿದಂತ ಸಮಿತಿಯಿಂದ ತನಿಖೆ ನಡೆಸುವಂತೆಯೂ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದ್ದಾರೆ. ಇಂದು ಸದನ ಆರಂಭವಾಗುತ್ತಿದ್ದಂತೆ ಸಿಡಿ ಹಿಡಿದು ಸದನದ ಭಾವಿಗೆ ಇಳಿದು ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ದರಿಂದಾಗಿ, ಸ್ಪೀಕರ್ ಅವರು 10 ನಿಮಿಷಗಳ ಕಾಲ ಕಲಾಪವನ್ನು ಮುಂದೂಡಿದರು.

NEWS DESK

TIMES OF BENGALURU