ವಿದ್ಯಾರ್ಥಿಗಳಿಗೆ ಪರೀಕ್ಷೆ ಕೇಂದ್ರ ಬದಲಾಯಿಸುವ ಅವಕಾಶ

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ 10 ಮತ್ತ 12ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್ ಮತ್ತು ಥಿಯರಿ ಪರೀಕ್ಷೆಗಳ ಕೇಂದ್ರವನ್ನು ಬದಲಾಯಿಸಲು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಅವಕಾಶ ನೀಡಿದೆ. ಈ ನಿರ್ಧಾರಕ್ಕೆ ಸಂಬಂಧಿಸಿದ ನೋಟೀಸ್ ಅನ್ನು ಮಂಡಳಿಯ ಅಧಿಕೃತ ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಲಾಗಿದೆ.

ನೋಟೀಸ್ ಪ್ರಕಾರ ತಮ್ಮ ಕೇಂದ್ರಗಳನ್ನು ಬದಲಾಯಿಸಲು ಬಯಸುವ ವಿದ್ಯಾರ್ಥಿಗಳು 2021ರ ಮಾ.25 ರೊಳಗೆ ಬದಲಾಯಿಸಿ ವಿನಂತಿಯನ್ನು ತಮ್ಮ ಶಾಲೆಗಳಿಗೆ ಕಳುಹಿಸಬಹುದು. ನಂತರ ಶಾಲೆಗಳು ಮಾ.31ರೊಳಗೆ ಸಿಬಿಎಸ್‍ಇ ಅಧಿಕೃತ ವೆಬ್‍ಸೈಟ್‍ಗೆ ವಿನಂತಿಯನ್ನು ಅಪ್ಲೋಡ್ ಮಾಡಲಾಗುತ್ತದೆ.

NEWS DESK
TIMES OF BENGALURU