ಕಿಡಿಗೇಡಿಗಳ ಅಟ್ಟಹಾಸ; 15 ಕಾರುಗಳ ಗಾಜುಗೆ ಹಾನಿ

ಬೆಂಗಳೂರು: 15ಕ್ಕೂ ಹೆಚ್ಚು ಕಾರ್ ಗಳ ಗಾಜುಗಳನ್ನು ಹಾನಿ ಮಾಡಲಾಗಿದೆ. ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಚ್ಚು, ಲಾಂಗುಗಳಿಂದ ಇಬ್ಬರು ಯುವಕರು ದಾಳಿ ಮಾಡಿದ್ದಾರೆ. ರಸ್ತೆ ಬದಿ ನಿಲ್ಲಿಸಿದ ವಾಹನಗಳನ್ನು ಜಖಂಗೊಳಿಸಿ ಅಟ್ಟಹಾಸ ಮೆರೆದಿದ್ದಾರೆ.

ಇಬ್ಬರು ಕಿಡಿಗೇಡಿಗಳ ಕೃತ್ಯದ ಅಟ್ಟಹಾಸ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ. ಕಾರ್ ಗಾಜು ಒಡೆದು ಹಾಕಿದ್ದರಿಂದ ಭಾರೀ ಹಾನಿಯಾಗಿದ್ದು, ವಾಹನಗಳ ಮಾಲೀಕರು ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ ಎನ್ನಲಾಗಿದೆ.

NEWS DESK
TIMES OF BENGALURU