ಕಾಂಗ್ರೆಸ್, ಜೆಡಿಎಸ್ ನಾಯಕರಿಗೆ ಓಪನ್ ಚಾಲೆಂಜ್

ಬೆಂಗಳೂರು : ವಿಧಾಸನಭೆಯಲ್ಲಿ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ ಕುರಿತಂತೆ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಸಚಿವರಾಗಿ ಕೋರ್ಟ್ ಮೊರೆ ಹೋದಂತ 6 ಸಚಿವರ ರಾಜೀನಾಮೆಗೂ ವಿಪಕ್ಷಗಳು ಒತ್ತಾಯಿಸಿವೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನಾನು ವಿಶೇಷವಾಗಿ ಸದನಲ್ಲಿ ಕೂಡ ಹೇಳಬೇಕು ಅಂದುಕೊಂಡಿದ್ದೆ. ಯಾರಿವತ್ತು ಬಹಳ ಮರ್ಯಾದಾ ಪುರುಷರು, ಶ್ರೀರಾಮ ಚಂದ್ರರು ಅಂತ ಕಾಂಗ್ರೆಸ್‍ನ ನಾಯಕರುಗಳು, ಜೆಡಿಎಸ್‍ನ ನಾಯಕರುಗಳು ಯಾರೆಲ್ಲಾ ವಿರೋಧ ಪಕ್ಷದ ನಾಯಕು ಮಾತನಾಡುತ್ತಾ ಇದ್ದಾರೆ, ಅವರಿಗೆ ಒಂದು ಸವಾಲ್ ಹಾಕುತ್ತೇನೆ.  ಇವರೆಲ್ಲಾ ಏಕ ಪತ್ನಿ ವ್ರತಸ್ತರಾ..? 225 ಜನ ಕೂಡ ತನಿಖೆಗೆ ಒಳಪಡಲಿ. ನಿಮ್ಮ ನಿಮ್ಮ ಜೀವನದಲ್ಲಿ ಯಾರ್ ಅನೈತಿಕ ಸಂಬಂಧ ಇಟ್ಟುಕೊಂಡಿಲ್ಲ ಯಾರ್ ಯಾರ್ದು ಪ್ರೂ ಆಗ್ತಾದಲ್ಲ ಆಗಲಿ. ನನ್ನನ್ನು ಸೇರಿ ಆಗಲಿ ಎಂದು ಓಪನ್ ಚಾಲೆಂಜ್ ಹಾಕಿದ್ದಾರೆ.

NEWS DESK

TIMES OF BENGALURU