ಸುಧಾಕರ್ ಗೆ ಡಿ.ಕೆ.ಶಿವಕುಮಾರ್ ತಿರುಗೇಟು

ಬೆಂಗಳೂರು: ರಾಜ್ಯದ 224 ಶಾಸಕರದ್ದೂ ತನಿಖೆಯಾಗಲಿ ಯಾರಿಗೆಲ್ಲಾ ಅನೈತಿಕ ಸಂಬಂಧ ಇದೆ ಎಂದು ಗೊತ್ತಾಗಲಿದೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್, ಸಚಿವ ಸುಧಾಕರ್ ನುಡಿಮುತ್ತುಗಳನ್ನು ಇಡೀ ರಾಜ್ಯಕ್ಕೆ ಕೊಟ್ಟಿದ್ದಾರೆ. ಇವರ ಹೇಳಿಕೆಯನ್ನು ಅಸೆಂಬ್ಲಿಯಲ್ಲಿ ಚರ್ಚೆ ಮಡಬೇಕು. ಇದು ಸಾಮೂಹಿಕ ವಿಚಾರ, ನನಗಿರುವುದು ಒಬ್ಬ ಹೆಂಡತಿ, ನಂದು ಒಂದೇ ಸಂಸಾರ ಎಂದು ಹೇಳಿದ್ದಾರೆ.

NEWS DESK
TIMES OF BENGALURU