ಎಲ್ಲರ ಮನೆ ದೋಸೆನೂ ತೂತೇ

ಬೆಂಗಳೂರು: ಎಲ್ಲರ ಮನೆ ದೋಸೆನೂ ತೂತೇ ಯಾರೂ ಕೂಡ ಸತ್ಯಹರಿಶ್ಚಂದ್ರರಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಸಚಿವ ಸುಧಾಕರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಭೂಮಿ ಮೇಲೆ ಜನಿಸಿದ ಪ್ರತಿಯೊಂದು ಜೀವಿಯೂ ತಪ್ಪು ಮಾಡುತ್ತೆ. ನಾನು ಈ ಹಿಂದೆ ಎಡವಿದ್ದ ಬಗ್ಗೆ ಒಪ್ಪಿಕೊಂಡಿದ್ದೆನೆ.

ಇಲ್ಲಿ ಯಾರು ಹರಿಶ್ಚಂದ್ರರಲ್ಲ ನೀವು ಸತ್ಯವಂತರಾದರೆ ಕೋರ್ಟ್‍ಗೆ ಏಕೆ ತಡೆಯಾಜ್ಞೆ ತಂದಿರಿ, ನಾನು ಮಾಡಿರುವ ತಪ್ಪು ಒಪ್ಪಿಕೊಂಡಿರುವಾಗ ನನ್ನ ಹೆಸರನ್ನು ಏಕೆ ಎಳೆದು ತರುತ್ತೀರಿ ಎಂದು ಪ್ರತಿಕ್ರಿಯಿಸಿದರು. ಜನರ ಸಮಸ್ಯೆಯನ್ನು ಬಗೆಹರಿಸುವುದನ್ನು ಬಿಟ್ಟು ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

NEWS DESK
TIMES OF BENGALURU