ನಾವೇನು ಸಾಲ ಮಾಡಿ ತುಪ್ಪ ತಿಂದಿಲ್ಲ

ಬೆಂಗಳೂರು: ನಾವೇನು ಸಾಲ ಮಾಡಿ ತುಪ್ಪ ತಿಂದಿಲ್ಲ ಅಥವ ಔತಣ ನಡೆಸಲು ಸಾಲದ ಹಣ ಬಳಸಿಲ್ಲ ಎಂದು ವಿರೋಧ ಪಕ್ಷಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು ಸಮೃದ್ದಿಯ ಸಂದರ್ಭದಲ್ಲೇ ಸರ್ಕಾರ ಸಾಲ ಮಾಡಿದೆ. ಅಂತದ್ರಲ್ಲಿ ಕೊರೊನಾ ಸಂಕಷ್ಟ ಮತ್ತು ಭಾರೀ ಮಳೆಯಿಂದ ಪ್ರವಾಹ ಉಂಟಾದ ಪರಿಸ್ಥಿತಿಯಲ್ಲಿ ಸಾಲ ಮಾಡದೆ ಅಭಿವೃದ್ಧಿ ಮಾಡೋಕೆ ಹೇಗೆ ಸಾಧ್ಯ..?

ಆರ್ಥಿಕ ಚೈತನ್ಯ ಸಾಧ್ಯವಾಗುತ್ತಾ ಎಂದು ಪ್ರಶ್ನಿಸಿದರು. ಕೊರೊನಾ ಸಾಂಕ್ರಾಮಿಕ ಕಾಯಿಲೆ ವಿಶ್ವವ್ಯಾಪಿಯಾಗಿ ಹರಡಿದೆ ಅದಕ್ಕೆ ದಿಢೀರನೆ ಪರಿಹಾರ ನೀಡಲು ಸರ್ಕಾರದ ಬಳಿ ಯಾವುದೇ ಮಂತ್ರ ಇರೋದಿಲ್ಲ. ಸರ್ಕಾರದ ಬೊಕ್ಕಸ ಅಕ್ಷಯ ಪಾತ್ರೆಯೂ ಅಲ್ಲ. ಇದು ಪ್ರತಿ ಪಕ್ಷದವರಿಗೆ ಗೊತ್ತಿರದ ಸಂಗತಿಯೇನು ಅಲ್ಲ ಎಂದರು.

NEWS DESK
TIMES OF BENGALURU