ಕಲುಷಿತ ಗಾಳಿ ಶುದ್ಧೀಕರಿಸುವ ನೂತನ ಯಂತ್ರ

ಬೆಂಗಳೂರು:  ಗಾಳಿಯನ್ನು ಶುದ್ಧೀಕರಿಸುವ ಹೊಂಜು ಗೋಪುರವನ್ನು ನೂತನ್ ಲ್ಯಾಬ್ಸ್ ಕರ್ನಾಟಕ ನವೋದ್ಯಮ ಸಂಸ್ಥೆಯು ನಗರದ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದೆ. ಈ ಯಂತ್ರವನ್ನು ಹಡ್ಸನ್ ವೃತ್ತದ ಬಳಿ ಪ್ರಾಯೋಗಿಕವಾಗಿ ಅಳವಡಿಸಲಾಗಿದೆ.

ನ್ಯಾನೊ ತಂತ್ರಜ್ಞಾನದ ಆಧಾರದಲ್ಲಿ ಕೆಲಸ ಮಾಡುವ ಈ ಹೊಂಜು ಗೋಪುರವು ವಾತಾವರಣದಲ್ಲಿರುವ ಕಲುಷಿತ ಗಾಳಿಯನ್ನು ಹೀರಿಕೊಂಡು ನ್ಯಾನೊ ಕಣಗಳ ಮೂಲಕ ಹಾಯಿಸುತ್ತದೆ. ಪಿ.ಎಂ 2.5ನಿಂದ ಪಿ.ಎಂ 10 ಗಾತ್ರದವರೆಗಿನ ಧೂಳಿನ ಕಣಗಳು, ಇಂಗಾಲದ ಮಾನಾಕ್ಸೈಡ್, ಗಂಧಕದ ಡೈಯಾಕ್ಸೈಡ್, ನೈಟ್ರೋಜಿನಸ್ ಆಕ್ಸೈಡ್, ಆವಿಯಾಗುವ ಆರ್ಗಾನಿಕ್ ಸಂಯುಕ್ತಗಳು ಮತ್ತು ಇತರ ಅಪಾಯಕಾರಿ ರಾಸಾಯನಿಕ ಪದಾರ್ಥಗಳನ್ನು ಇದು ಹೀರಿಕೊಳ್ಳುತ್ತದೆ’ ಎಂದು ಈ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ.

ಹೊಂಜು ಗೋಪುರವು ಒಟ್ಟು 11 ಹಂತಗಳಲ್ಲಿ ಕಾರ್ಯನಿರ್ವಹಿಸಲಿದೆ. ಸಣ್ಣ ಸಣ್ಣ ಧೂಳಿನ ಕಣ, ಗಾಳಿಯಲ್ಲಿರುವ ವಿಷಯುಕ್ತ ಅನಿಲಗಳು ಸೇರಿದಂತೆ ಅಪಾಯಕಾರಿ ಅಂಶಗಳನ್ನು ಹೀರಿಕೊಂಡು ಶುದ್ಧ ಗಾಳಿಯನ್ನು ಹೊರಬಿಡುತ್ತದೆ. ಪ್ರತಿ ನಿಮಿಷಕ್ಕೆ 15 ಸಾವಿರ ಘನ ಅಡಿಗಳಷ್ಟು ಗಾಳಿಯನ್ನು ಶುದ್ಧೀಕರಿಸಬಲ್ಲದು. ಅತ್ಯಂತ ಹೆಚ್ಚು ವಾಯು ಮಾಲಿನ್ಯ ಇರುವ ಕಡೆ ಇದನ್ನು ಸ್ಥಾಪಿಸಿ ಕಲುಷಿತ ಗಾಳಿಯನ್ನು ಶುದ್ಧೀಕರಿಸಬಹುದಾಗಿದೆ.

NEWS DESK

TIMES OF BENGALURU