ಸುಧಾಕರ್ ವಿರುದ್ಧ ಮಹಿಳಾ ಶಾಸಕಿಯರು ಗರಂ

ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಹಿನ್ನೆಲೆಯಲ್ಲಿ ಈ ವಿವಾದ ಇದೀಗ ಭಾರಿ ಕೋಲಾಹಲ ಸೃಷ್ಟಿಸಿದೆ. ಈ ಮಧ್ಯೆ ಏಕಪತ್ನಿ ವ್ರತಸ್ಥರು ಯಾರಿದ್ದಾರೆ ಎಂದು ಸವಾಲು ಹಾಕಿರುವ ವೈದ್ಯಕೀಯ ಸಚಿವ ಡಾ.ಸುಧಾಕರ್ ವಿರುದ್ದ ಮಹಿಳಾ ಶಾಸಕಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಪ್ಪು ಯಾರು ಮಾಡಿದರೂ ತಪ್ಪು. ಕೆಲ ವಿಷಯಗಳು ಹೇಳಲಾರದ ಸಂಗತಿಗಳಿರುತ್ತವೆ. ಎಲ್ಲವನ್ನೂ ಬೀದಿ ರಂಪ ಮಾಡಿ ಸದನದ ಗೌರವ ಘನತೆ ಹರಾಜು ಹಾಕಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ನಾವೆಲ್ಲರೂ ತುತ್ತಾಗಬೇಕಾಗಿದೆ. ಈ ಹೇಳಿಕೆ ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಯಾರೋ ಮಾಡಿದ ತಪ್ಪು ಸಮರ್ಥನೆ ಮಾಡಿಕೊಳ್ಳಲು ಮತ್ಯಾರನ್ನೋ ಎಳೆದು ತರುವುದು ಅವರಿಗೆ ಶೋಭೆ ತರುವಂತದ್ದಲ್ಲ. ಸಂಸ್ಕಾರ ಇದ್ದವರು ಈ ರೀತಿಯಲ್ಲಿ ಮಾತನಾಡುತ್ತಿರಲಿಲ್ಲ ಎಂದು ಮಹಿಳಾ ಶಾಸಕಿಯರು ಅಸಮಾಧಾನ ತೋರಿದರು.

NEWS DESK

TIMES OF BENGALURU