ವಾಹನ ಕಳವು: ಆರೋಪಿಯ ಬಂಧನ

ಬೆಂಗಳೂರು: ಮನೆಯ ಸಮೀಪ ನಿಲ್ಲಿಸಿದ ವಾಹನಗಳನ್ನು ಕದಿಯುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವರು. ಜೆ.ಪಿ.ನಗರ ಸಮೀಪದ ರಾಗಿಗುಡ್ಡದ ಕೊಳೆಗೇರಿ ನಿವಾಸಿ ಮಾರಿಮುತ್ತು (24) ವರ್ಷ ಬಂಧಿತ ಆರೋಪಿ. ವಾಹನಗಳ ಬೀಗ ಮುರಿದು ವಾಹನಗಳನ್ನು ಕದಿಯುತ್ತಿದ್ದ.

ಪರಪ್ಪನ ಅಗ್ರಹಾರ, ಜೆ.ಪಿ.ನಗರ, ಆಡುಗೋಡಿ ಠಾಣೆಗಳ ಸರಹದ್ದಿನಲ್ಲಿ ಕಳವು ಮಾಡಿದ್ದ ವಾಹನಗಳನ್ನು ಮಾರಲು ಯತ್ನಿಸುತ್ತಿದ್ದಾಗ ಆರೋಪಿಯನ್ನು ಬಂಧಿಸಲಾಯಿತು. ಕಳವಾಗಿದ್ದ ಐದು ದ್ವಿಚಕ್ರ ವಾಹನಗಳನ್ನು ಆರೋಪಿಯಿಂದ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು.

NEWS DESK
TIMES OF BENGALURU