ಇಂದು ಜಲಮಂಡಳಿಯ ಅದಾಲತ್

ಬೆಂಗಳೂರು: ಜಲಮಂಡಳಿಯು ವಿವಿಧ ಉಪವಿಭಾಗಗಳಲ್ಲಿ ಇದೇ 25ರಂದು ಬೆಳಿಗ್ಗೆ 9.30ರಿಂದ 11ರವರೆಗೆ ನೀರಿನ ಅದಾಲತ್ ಹಮ್ಮಿಕೊಳ್ಳಲಾಗಿದೆ. ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ವಾಣಿಜ್ಯ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದು ಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅದಾಲತ್‍ನಲ್ಲಿ ಪರಿಹರಿಸಲಾಗುವುದು. ಬಳಕೆದಾರರು ಸಂಬಂಧಪಟ್ಟ ಉಪವಿಭಾಗದ ಕಚೇರಿಗೆ ತೆರಳಿ ಅದಾಲತ್‍ನಲ್ಲಿ ಪಾಲ್ಗೊಳ್ಳಬಹುದು.

NEWS DESK

TIMES OF BENGALURU