ಇನ್ನೆರಡು ತಿಂಗಳು ಜನ ಎಚ್ಚರಿಕೆಯಿಂದರಬೇಕು

ಬೆಂಗಳೂರು: ಕೊರೊನಾ ಎರಡನೆಯ ಅಲೆ ವೈರಸ್ ವೇಗ ಹೆಚ್ಚಾಗುತ್ತಿದ್ದು, ಇನ್ನೆರಡು ತಿಂಗಳು ಇದು ತೀರಾ ಅಪಾಯಕಾರಿ ಎನ್ನುವ ಮಟ್ಟದಲ್ಲಿ ಇರುವ ಹಿನ್ನೆಲೆಯಲ್ಲಿ ಇನ್ನು 2 ತಿಂಗಳ ಕಾಲ ಇರಬೇಕು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

ದೇಶದಲ್ಲಿ 700ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಇಂತಹ ಪ್ರಕರಣ ಸದ್ಯ ಪತ್ತೆಯಾಗಿಲ್ಲ. ಇದರ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು. ಜತೆಗೆ, ಕೊರೊನಾ ಎರಡನೆಯ ಅಲೆ ಹೆಚ್ಚಾಗುತ್ತಿದ್ದು, ಇದಾಗಲೇ ರಾಜ್ಯ ಸರ್ಕಾರ ಇದಾಗಲೇ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಕೆಮ್ಮು, ನೆಗಡಿ ಕಾಣಿಸಿಕೊಂಡರೆ ನಿರ್ಲಕ್ಷ್ಯ ತೋರದೆ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸುಧಾಕರ್ ಹೇಳಿದ್ದಾರೆ.

NEWS DESK

TIMES OF BENGALURU