ಸಿಡಿ ಲೇಡಿ ನೆರವಿಗೆ ನಿಂತ ಶಶಿಕಲಾ ಜೊಲ್ಲೆ

ಬೆಂಗಳೂರು: ಸಿಡಿ ಕೇಸ್‍ನಲ್ಲಿರುವ ಯುವತಿಗೆ ರಕ್ಷಣೆ ಕೊಡುವುದಾಗಿ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ಕಾಂಗ್ರೆಸ್‍ನ ಹಲವಾರು ಶಾಸಕಿಯರು ಯುವತಿಗೆ ರಕ್ಷಣೆ ಕೊಡುವುದಾಗಿ ಮುಂದೆ ಬಂದಿರುವ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಕೂಡ ಮುಂದಾಗಿದ್ದಾರೆ.

ಹೆಣ್ಣುಮಗಳಿಗೆ ಅನ್ಯಾಯ ಆಗಿದೆಯೇ ಎಂಬುದು ತನಿಖೆ ಆದಮೇಲೆ ಗೊತ್ತಾಗುತ್ತದೆ. ಆದರೆ ಅವರಿಗೆ ರಕ್ಷಣೆ ನೀಡುವುದು ನಮ್ಮ ಜವಾಬ್ದಾರಿ. ಅದನ್ನು ಮಾಡುತ್ತೇವೆ ಎಂದರು. ಗೃಹ ಸಚಿವ ಬೊಮ್ಮಾಯಿ ಅವರು ಮತ್ತು ಸ್ವತಃ ಮುಖ್ಯ ಮಂತ್ರಿಗಳು ಆ ಮಹಿಳೆಗೆ ರಕ್ಷಣೆ ಕೊಡುವುದಾಗಿ ಸದನದಲ್ಲಿ ಹೇಳಿದ್ದಾರೆ. ಈಗ ನಮ್ಮಿಂದ ರಕ್ಷಣೆ ಕೊಡುವ ಕೆಲಸ ಮಾಡುತ್ತೇವೆ. ಹೆಣ್ಣು ಮಗಳಿಗೆ ರಕ್ಷಣೆ ಕೊಡುವುದು ನಮ್ಮ ಕರ್ತವ್ಯ ಎಂದರು.

NEWS DESK
TIMES OF BENGALURU