ಸದನದ ಗೌರವ ಹಾಳು ಮಾಡುತ್ತಿದ್ದಾರೆ

ಬೆಂಗಳೂರು: ಹತ್ತು ಹಲವು ಆದರ್ಶಗಳಿಗೆ ಹೆಸರಾಗಿದ್ದ ವಿಧಾನಸಭೆ ಈಗ ಸಿಡಿ, ಏಕಪತ್ನಿಯಂತಹ ವಿಷಯಗಳ ಬಗ್ಗೆ ಚರ್ಚೆ ಮಾಡುವ ಸ್ಥಳವಾಗಿ ಬಿಟ್ಟಿದೆ. ಕನ್ನಡ ಚಳುವಳಿ ಅಧ್ಯಕ್ಷ ವಾಟಾಳ್ ನಾಗರಾಜ್ ಇದರ ಬಗ್ಗೆ ವಿಷಾದಿಸಿದರು. ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಇಂದು ಕರಾಳ ದಿನ ಆಚರಣೆ ಮಾಡಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿಪಕ್ಷ ಆಡಳಿತ ಪಕ್ಷ ರಾಜ್ಯದ ಸಮಸ್ಯೆಗಳನ್ನು ನಿರ್ಲಕ್ಷಿಸಿ ಆಯವ್ಯಯದ ಅಧಿವೇಶನದಲ್ಲಿ ಯಾವುದೇ ಗಂಭೀರ ಚರ್ಚೆಗಳನ್ನು ನಡೆಸದೆ ಅನಿರ್ದಿಷ್ಟಾವಧಿ ಸದನ ಮುಂದೂಡಿದ್ದು ವಿಪರ್ಯಾಸ ಎಂದು ಹೇಳಿದರು.

ಆಯವ್ಯಯದ ಬಗ್ಗೆ ಪ್ರತಿಪಕ್ಷಗಳು ಗಂಭೀರವಾಗಿ ಚರ್ಚೆ ನಡೆಸಬೇಕಿತ್ತು. ವಿಧಾನಸಭೆ ತನ್ನ ಗಾಂಭೀರ್ಯತೆಯನ್ನು ಕಳೆದುಕೊಂಡಿದೆ. ಜನಪ್ರತಿನಿಧಿಗಳು ಅಗೌರವವಾಗಿ ನಡೆದುಕೊಂಡಿದ್ದಾರೆ. ಬಾಯಿಗೆ ಬಂದಂತೆ ಹೇಳಿಕೆಯನ್ನು ನೀಡಿ ಸದನದ ಗೌರವವನ್ನು ಹಾಳು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

NEWS DESK
TIMES OF BENGALURU