ಪತಿಯನ್ನೇ ಕೊಲೆಮಾಡಿಸಿದ ಕಿರಾತಕಿ

ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿ ಪಡಿಸುತ್ತಿದ್ದ ಪತಿಯನ್ನೇ ಹತ್ಯೆ ಮಾಡಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪತ್ನಿ ಮತ್ತು ಪ್ರಿಯಕರನ ಗ್ಯಾಂಗ್‍ನ್ನು ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಮಹಮ್ಮದ್ ರಫಿ ಮೃತ ವ್ಯಕ್ತಿ. ತಸ್ಮಿನಾ ಬಾನು ಮೃತನ ಪತ್ನಿ. ಈಕೆಯ ಪ್ರಿಯಕರ ಅಪ್ಸರ್ ಖಾನ್. ಬಾನು ಮತ್ತು ಅಪ್ಸರ್ ಖಾನ್‍ಗೆ ಎರಡು ವರ್ಷಗಳಿಂದಲೇ ಪರಿಚಯವಿತ್ತು. ಅಂತಯೇ ಅಪ್ಸರ್ ಖಾನ್‍ಗೂ ಮತ್ತು ಮಹಮ್ಮದ್ ರಫಿಗೂ ಪರಿಚಯವಿತ್ತು.

ಈ ನಡುವೆ ಮಹಮ್ಮದ್ ರಫಿ ಮೂಲಕ ಮೈಸೂರಿನಲ್ಲಿ 75 ಲಕ್ಷ ರೂ.ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಆರೋಪಿ ಹೂಡಿಕೆ ಮಾಡಿಸಿದ್ದ. ಇದಕ್ಕೆ ಐದು ಲಕ್ಷ ಕಮೀಷನ್ ಕೊಡುತ್ತೇನೆ ಎಂದು ಹೇಳಿದ್ದ. ಇದರ ಉದ್ದೇಶವೆಂದರೆ ಆತನ ಜತೆ ಸಂಪರ್ಕದಲ್ಲಿ ಇದ್ದರೆ, ಆತನ ಪತ್ನಿ ಜತೆ ಅಕ್ರಮ ಸಂಬಂಧ ನಿರಾತಂಕವಾಗಿ ಮುಂದುವರೆಸಬಹುದು ಎಂದು ಸ್ಕೆಚ್ ಹಾಕಿದ್ದ. ಕೊನೆಗೆ ತಸ್ಮಿನಾ ಬಾನು ತನ್ನ ಪ್ರಿಯಕರನ ಜತೆ ಸೇರಿ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದಳು. ಕಮಿಷನ್ ಕೊಡುವ ನೆಪದಲ್ಲಿ ಕರೆಸಿಕೊಂಡಿದ್ದ ಅಪ್ಸರ್ ಸಹಚರರು ಸೇರಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಸಂಬಂಧ ಪತ್ನಿ ಪ್ರಿಯಕರ ಸೇರಿದಂತೆ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

NEWS DESK
TIMES OF BENGALURU